Saturday, April 19, 2025

Latest Posts

ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ,  ಎಂಪಿ ಟಿಕೆಟ್ 9 ಅಥವಾ 10ಕ್ಕೆ ಒಂದನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ.  ಬಿಜೆಪಿ ಕುಬೇರರ ಪಕ್ಷ, 4 ಸಾವಿರ ಕೋಟಿ ಗಿಂತ ಹೆಚ್ಚು ಆಸ್ತಿ ಇದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೆ ನಾವು. ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು ಎಂದು ಹೇಳಿದ್ದಾರೆ.

ಎಚ್ ಎನ್ ರವೀಂದ್ರ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅವರ ಅಭಿಪ್ರಾಯ ಅವರದ್ದು, ನಾವು ಏನು ಮಾಡೋಕೆ ಆಗುತ್ತೆ. ವ್ಯಯಕ್ತಿಕವಾಗಿ ಹೇಳಿದ್ದಕ್ಕೆಲ್ಲಾ ನಾವು ಟೀಕೆ ಮಾಡೋಕೆ ಆಗುತ್ತಾ? ನಮ್ಮ ಪಕ್ಷದಲ್ಲಿ ದುಡಿದ್ರಲ್ಲಿದೆ, ಇತಿಹಾಸದಲ್ಲೇ ದುಡ್ಡು ತಗೊಂಡು ಪಾರ್ಲಿಮೆಂಟ್, ಅಸೆಂಬ್ಲಿ ಸೀಟ್ ಕೊಟ್ಟಿರೋದು ಆರೋಪ ಇದಿಯಾ? ಬಿಜೆಪಿ ಕುಬೇರರ ಪಕ್ಷ, 4 ಸಾವಿರ ಕೋಟಿ ಗಿಂತ ಹೆಚ್ಚು ಆಸ್ತಿ ಇದೆ. ಅವರು ಏನೇನು ಮಾಡ್ಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನೆ ನೀವು ಕೇಳ್ಬೇಕು, ಆತರದ್ದು ಏನು ಇಲ್ಲ. ನಮ್ಮಲ್ಲಿ ಬಹಳ ಜನ ಇದ್ದಾರೆ, ಸೀಟ್ ಸಿಗದಿದ್ದಾಗ ಆ ರೀತಿ ಹತಾಶರಾಗಿ ಹೇಳಿದ್ದಾರೆ. ಅದಕ್ಕೆ ಹೆಚ್ಚು ಒತ್ತು ಕೊಡೋದು ಬೇಡ ಎಂದು ಹೇಳಿದ್ದಾರೆ. .

ಲೋಕಸಭಾ ಚುನಾವಣೆ ಟಿಕೆಟ್ ಆದಷ್ಟು ಬೇಗ ಆಗುತ್ತೆ. 9 ಅಥವಾ 10ಕ್ಕೆ ಒಂದನೇ ಪಟ್ಟಿ ಬಿಡುಗಡೆ ಆಗಬಹುದು. ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡ್ತೇವೆ. ಯಾರು ಅಸಮಾಧಾನ ಇಲ್ಲ, ಎಲ್ಲರೂ ಸಮಾಧಾನದಿಂದ ಇದ್ದಾರೆ. ಅಸೆಂಬ್ಲಿ 224 ಇತ್ತು ಹೀಗಾಗಿ ಬೇಗ ಬಿಡುಗಡೆ ಮಾಡಿದ್ವಿ. ಈಗ ಇರೋದು 28, ಈಗಾಗಲೇ ಅಂತಿಮ ಆಗಿರಬಹುದು. ನಾಲ್ಕು ಅಥವಾ ಐದು ಕ್ಷೇತ್ರದಲ್ಲಿ ಆಕಾಂಕ್ಷೆಗಲು ಹೆಚ್ಚಿದ್ದಾರೆ, ಸ್ವಲ್ಪ ಒತ್ತಡಗಳಿವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಪಾಕ್ ಪರ ಘೋಷಣೆ ವಿಚಾರo ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಪಾಕ್ ಪರ ಘೋಷಣ ಕೂಗಿದವರನ್ನ ನಾವೆಲ್ಲರೂ ಖಂಡಿಸಿದ್ದೇವೆ. ಅದನ್ನು ಯಾರು ಒಪ್ಪುವಂತದ್ದಲ್ಲ, ಕೇಸ್ ಹಾಕಿ ಜೈಲಿಗೆ ಕಳ್ಸಿದ್ದೇವೆ. ಬಿಜೆಪಿ ಅವರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವಾಗ ಕಾರ್ಯಕರ್ತ ಒಬ್ಬ ಪಾಕ್ ಪರ ಘೋಷಣೆ ಕೂಗ್ತಾನೇ. ಇನ್ನೊಬ್ಬ ಅವನ ಬಾಯಿ ಮುಚ್ಚಿದ್ರು ಅದನ್ನೇ ಕೂಗ್ತಾನೆ. ಅವತ್ತು ಬಿಜೆಪಿ ಅವರು ಸುಮ್ಮನೆ ಇದ್ರೂ. ನಾವು ಅವತ್ತು ಖಂಡಿಸಿದ್ದೇವೆ, ಇವತ್ತು ಖಂಡಿಸಿದ್ದೇವೆ, ಮುಂದೇನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೆ ನಾವು ಕಾಂಗ್ರೆಸ್ ನವರು. ಬಿಜೆಪಿ ಪೂರ್ವಜ್ಜರು ಅಂದ್ರೆ ಆರ್ ಎಸ್ ಎಸ್, ಹಿಂದೂ ಪರಿಷತ್ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೆ ನಮ್ಮ ಕಾಂಗ್ರೆಸ್ ಪಕ್ಷ. ನಮಗಿದ್ದಷ್ಟು ದೇಶಾಭಿಮಾನ ಅವರಗಿಲ್ಲ. ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು. ಎಫ್ ಎಸ್ ಎಲ್ ವರದಿಯನ್ನು ಅಧಿಕೃತ ಅಂತ ಗೃಹಮಂತ್ರಿಗಳು ಹೇಳಿದ್ದಾರೆ. ಕ್ರಮ ಆಗಿದೆ, ಮುಂದಿನದ್ದನ್ನು ಕೋರ್ಟ್ ನೋಡಿಕೊಳ್ಳುತ್ತೆ.

ಮಂಡ್ಯದಲ್ಲಿ ಬಿಜೆಪಿ ಅವರು ಅವರ ಕಾರ್ಯಕರ್ತ ಕೂಗಿದಾಗ ಏನು ಮಾಡ್ತಾ ಇದ್ರು, ಯಾಕೆ ಖಂಡಿಸಿಲ್ಲ..? ಪ್ರತಾಪ್ ಸಿಂಹ ಅವರೇ ಪಾರ್ಲಿಮೆಂಟ್ ಗೆ ಪಾಸ್ ಕೊಟ್ಟಿದ್ರು. ಅವರು ಅಲ್ಲಿ ಹೋಗಿ ಗ್ಯಾಸ್ ಬಾಂಬ್ ಹಾಗ್ತಾರೆ ಅದನ್ನ ಖಂಡಿಸಿಲ್ಲ. ಪ್ರತಾಪ್ ಸಿಂಹ ರಾಜೀನಾಮೆ ಯಾಕೆ ಕೇಳಿಲ್ಲ..? ಮಾತಾಡಿದ್ರೆ ಬಿದ್ದೋಗುತ್ತೆ ಅನ್ನೋಕೆ ಬಾಯಲ್ಲಿ ಬೆಣ್ಣೆ ಇಟ್ಕೊಂಡಿದ್ರಾ. ನಾವು ಬಂದಾಗ ಜನ ಕೂಡ್ತಾರೆ, ಯಾರೋ ಅದರಲ್ಲಿ ಒಬ್ರು ಕೂಗಿದ್ರೆ ನಾವು ಕೂಗಿದಂತಾ? ಲಕ್ಷ್ಮಿ ಹೆಬ್ಬಾಳ್ಕರ್ ಗೆ ಗೊತ್ತಿರ್ಲಿಲ್ಲ ಅನ್ಸುತ್ತೆ, ಯಾರೋ ಮಾಹಿತಿ ಕೊಟ್ಟಿರ್ತಾರೆ. ಒಬ್ಬರಿಗೆ ಒಂದೊಂದು ತರ ಮಾಹಿತಿ ಹೋಗಿರುತ್ತೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶೇಕ್‌ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು

ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್

ಅನಂತ್‌-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್

- Advertisement -

Latest Posts

Don't Miss