ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಶಾಂತಿ ಕದಡುವ ಸುಳ್ಳು ಸುದ್ದಿ ಹರಡಿಸಿರುವ ಆರೋಪದಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಗೆ (Director General of Police Praveen Sood) ಬಿಜೆಪಿ ಕೋಶಾಧ್ಯಕ್ಷ ಸುಬ್ಬನರಸಿಂಹ (Subbanarasimha) ನೇತೃತ್ವದಲ್ಲಿ ದೂರು ನೀಡಲಾಗಿದೆ. ಶಿವಮೊಗ್ಗದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಧ್ವಜ ಕಂಬಕ್ಕೆ ಕೇಸರಿ ಧ್ವಜ ಹಾರಿಸಿದ್ದರು. ಈ ಕುರಿತು ಡಿಕೆ ಶಿವಕುಮಾರ್ ನಿನ್ನೆ ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ದ್ವಜ ಆರಿಸಲಾಗಿದೆ ಎಂದು ಹೇಳಿದರು. ಹೀಗಾಗಿ NSUI ನವರು ರಾಷ್ಟ್ರಧ್ವಜವನ್ನು ಆರಿಸಿದ್ದಾರೆ. ಹಿಂದೆ ನಿಂತು ಪ್ರಚೋದಿಸಿ ಶಾಂತಿ ಕದಡುವ ಕೆಲಸಗಳು ಆಗುತ್ತಿವೆ (Threats are being made to stir up peace), ಡಿಕೆ ಶಿವಕುಮಾರ್ ಏನುಬೇಕಾದ್ರು ಆರೋಪಿಸುತ್ತಾರೆ. ಮತಾಂಧ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಬೆಂಬಲಿಸಿದ್ದಾರೆ, ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷ (Congress Party) ಕಳೆದುಹೋಗಿದೆ. ಮತೀಯ ಶಕ್ತಿಗಳ ಜೊತೆ ಆಟ ಆಡುವ ಕೆಲಸ ಬೇಡ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಆರೋಗ್ಯ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ರಾಜ್ಯದಲ್ಲಿ ಸುದ್ದಿ ಹಬ್ಬಿಸಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿಯವರು ದೂರು ನೀಡಿದ್ದಾರೆ.