ಬೆಂಗಳೂರು: ಮುಂಬೈನಲ್ಲಿ ಬಿಜೆಪಿ ಮುಖಂಡರ ಸಂಪರ್ಕದಲ್ಲಿರೋ ಪಕ್ಷೇತರ ಶಾಸಕರಿಗೆ ಕೇಸರಿ ನಾಯಕರು ರಕ್ಷಣೆ ನೀಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮುಖಂಡರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ನಾಳೆ ವಿಶ್ವಾಸಮತಕ್ಕೆ ಹಾಜರಾಗಬೇಕಿರುವ ಈ ಇಬ್ಬರೂ ಪಕ್ಷೇತರರನ್ನು ಬೆಂಗಳೂರಿಗೆ ಕರೆತರಲು ಡಿಕೆಶಿ ಮತ್ತು ಸಿದ್ದರಾಮಯ್ಯ ಭೀತಿ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೊಕ್ಕಿರುವ ಪಕ್ಷೇತರ ಶಾಸಕರು ಬಿಜೆಪಿ ಮುಖಂಡರ ಸಂಪರ್ಕದಲ್ಲಿದ್ದಾರೆ. ಆದ್ರೆ ನಾಳೆ ಬೆಳಗ್ಗೆವರಗೂ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಹಾಜರಾಗಬೇಕಿರುವ ಪಕ್ಷೇತರರನ್ನು ಕಾಪಾಡುವ ದೊಡ್ಡ ಜವಾಬ್ದಾರಿ ಬಿಜೆಪಿಯದ್ದು. ಇದೀಗ ಮುಂಬೈನಲ್ಲಿರೋ ಪಕ್ಷೇತರರನ್ನು ಒಂದು ವೇಳೆ ಬೆಂಗಳೂರಿಗೆ ಕರೆತಂದರೆ ಅವರನ್ನು ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಂಪರ್ಕ ಮಾಡೇ ಮಾಡ್ತಾರೆ. ಹೀಗಾಗಿ ನಾಳೆ ಬೆಳಗ್ಗೆ ವರೆಗೂ ಅವರಿಬ್ಬರನ್ನೂ ಮುಂಬೈನಲ್ಲೇ ಇರಿಸಲು ಬಿಜೆಪಿ ತೀರ್ಮಾನಿಸಿದ್ದು ಆ ಇಬ್ಬರೂ ಪಕ್ಷೇತರ ಶಾಸಕರ ಬೆಂಬಲ ಪಡೆಯಲಿದ್ದಾರೆ.
ಇನ್ನು ರಾಜೀನಾಮೆ ನೀಡಿದ ಬಳಿಕ ಯಾರ ಕೈಗೂ ಸಿಗದ ಶಾಸಕ ಎಂಟಿಬಿ ನಾಗರಾಜ್ ರನ್ನು ಸಚಿವ ಡಿಕೆಶಿ ಮತ್ತು ಸಿದ್ದರಾಮಯ್ಯ ಮನವೊಲಿಸಲು ಪ್ರಯತ್ನಿಸಿದ್ರು. ಒಂದೊಂಮ್ಮೆ ಇದೇ ಡಿಕೆಶಿ ಮತ್ತು ಸಿದ್ದು ಪಕ್ಷೇತರರನ್ನು ಬೆಂಗಳೂರಿನಲ್ಲಿರಿಸಿದೆ ಹೇಗಾದ್ರೂ ಮಾಡಿ ಸಂಪರ್ಕಿಸಿಬಿಡ್ತಾರೆ ಅನ್ನೋದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ.
ಸಕ್ಸಸ್ ಆಗುತ್ತಾ ಬಿಎಸ್ವೈ ಗೇಮ್ ಪ್ಲ್ಯಾನ್ ??? ಮಿಸ್ ಮಾಡದೇ ಈ ವಿಡಿಯೋ ನೋಡಿ