Tuesday, April 15, 2025

Latest Posts

ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್

- Advertisement -

Political News: ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಳೀನ್ ಕುಮಾರ್, ಹಿಂದೂಗಳ ಪವಿತ್ರ ಕ್ಷೇತ್ರ, ಈ ದೇಶದ ಅಸ್ಮಿತೆಯ ಪ್ರತಿರೂಪ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯ ಪುಣ್ಯ ಮಣ್ಣಿನಲ್ಲಿ ಶ್ರೀ ರಾಮನ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ ಶ್ರೀ ಬಾಲ ರಾಮನಿಗೆ ಚಾಮರ ಸೇವೆ ಮಾಡುವ ಸೌಭಾಗ್ಯ ನನ್ನದಾಯಿತು. ಈ ಸೌಭಾಗ್ಯ ನಮ್ಮೆಲ್ಲ ಹಿಂದೂ ಸಮಾಜದ ಪಾಲಿಗೆ ಒಳಿದು ಬರಲಿ ಎಂದು ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಜನವರಿ 23ರಿಂದ ಕಳೆದ ವಾರದವರೆಗೂ 60 ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲ್ಲಾನ ದರ್ಶನಕ್ಕಾಗಿ ಬಂದಿದ್ದು, ಒಂದೇ ತಿಂಗಳಲ್ಲಿ 25 ಕೋಟಿ ರೂಪಾಯಿ ಸಂಗ್ರವಾಗಿದ್ದು, ಬಾಲಕರಾಮ ದಾಖಲೆ ಬರೆದಿದ್ದಾನೆ. ಇನ್ನು ಜನವರಿ 23ರಿಂದ 11 ದಿನದಲ್ಲಿ 11 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಇನ್ನು ಕೆಲವರು ದೇವಸ್ಥಾನಕ್ಕಾಗಿ ಚೆಕ್, ಬ್ಯಾಂಕ್ ಮುಖಾಂತರ ದೇಣಿಗೆ, ಕಾಣಿಕೆ ನೀಡಿದ್ದಾರೆ. ಇವೆಲ್ಲವೂ ಸೇರಿಸಿ, ರಾಮಲಲ್ಲಾನಿಗೆ 25 ಕೋಟಿ ಕಾಣಿಕೆ ಹರಿದು ಬಂದಿದೆ. ಅಷ್ಟೇ ಅಲ್ಲದೇ, ಅಯೋಧ್ಯೆಗೆ ಬರುವ ರಾಮನ ಭಕ್ತರು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿದ ರಾಮನ ಮೂರ್ತಿಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಇವೆಲ್ಲದರ ಬೆಲೆ ಸೇರಿಸಿ 25 ಕೋಟಿ ರೂಪಾಯಿ ಸೇರಿದೆ.

ರಾಮ್‌ಚರಣ್‌ಗೆ ಇಡ್ಲಿ ವಡಾ ಎಂದು ಸಂಬೋಧಿಸಿದ ಶಾರೂಖ್ ಖಾನ್: ಫ್ಯಾನ್ಸ್ ಆಕ್ರೋಶ

ಅನಂತ್‌-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್

‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ?: ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss