Saturday, July 5, 2025

Latest Posts

ರಾಮ್‌ಚರಣ್‌ಗೆ ಇಡ್ಲಿ ವಡಾ ಎಂದು ಸಂಬೋಧಿಸಿದ ಶಾರೂಖ್ ಖಾನ್: ಫ್ಯಾನ್ಸ್ ಆಕ್ರೋಶ

- Advertisement -

Bollywood News: ಸದ್ಯ ಭಾರತದೆಲ್ಲೆಡೆ ಅಂಬಾನಿ ಮಗನ ಪ್ರಿವೆಡ್ಡಿಂಗ್‌ದೆ ಸುದ್ದಿ. ಸಾವಿರ ಕೋಟಿ ಖರ್ಚು ಮಾಡಿ, ಮಗನ ಪ್ರಿ ವೆಡ್ಡಿಂಗ್ ಮಾಡುತ್ತಿರುವ ಅಂಬಾನಿ, ಮದುವೆಗಾಗಿ ಚಂದ್ರಲೋಕಕ್ಕೆ ಹೋಗ್ತಾರೆನೋ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅಷ್ಟು ಅದ್ಧೂರಿಯಾಗಿದೆ ಅನಂತ್- ರಾಧಿಕಾ ಪ್ರಿವೆಡ್ಡಿಂಗ್.

ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನ ನಡೆದಿದ್ದ, ಕಾರ್ಯಕ್ರಮದ ವೀಡಿಯೋ ಝಲಕ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಸ್ಟಾರ್ಸ್, ಸೌತ್‌ನ ಕೆಲ ಪ್ರಸಿದ್ಧ ವ್ಯಕ್ತಿಗಳು ಸಹ ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಫಂಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಹಾಲಿವುಡ್ ಸಿಂಗರ್ ರಿಹಾನಾಳನ್ನು 75 ಕೋಟಿ ರೂಪಾಯಿ ಕೊಟ್ಟು ಕರೆಸಿ, ಎಲ್ಲರೂ ಸ್ಟೆಪ್ ಹಾಕುವಂತೆ ಮಾಡಿದ್ದರು ಅಂಬಾನಿ.

ಅದೇ ರೀತಿ ಖಾನ್‌ಗಳನ್ನು ಒಂದೇ ಸ್ಟೇಜ್‌ಗೆ ತಂದು ನಿಲ್ಲಿಸಿದ ಖ್ಯಾತಿಯೂ ಅಂಬಾನಿಯದ್ದಾಗಿದೆ. ಶಾರೂಖ್, ಸಲ್ಮಾನ್, ಅಮೀರ್ ಖಾನ್ ಒಂದೇ ಸ್ಟೇಜ್‌ನಲ್ಲಿ ಪರ್ಫಾರ್ಮ್ ಮಾಡಿದ್ದಾರೆ. ಆದರೆ ಈ ವೇಳೆ ಶಾರೂಖ್ ತಮಾಷೆ ಮಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಜೊತೆ ಸ್ಟೆಪ್ ಹಾಕಲು, ಸೌತ್ ಸ್ಟಾರ್ ರಾಮ್‌ಚರಣ್ ಅವರನ್ನು ಕರೆದಿದ್ದಾರೆ.

ಆದರೆ ರಾಮಚರಣ್ ಅವರ ಹೆಸರಿನಿಂದ ಸಂಬೋಂಧಿಸದೇ, ಇಡ್ಲಿ ವಡಾ ಎಂದು ಕರೆದಿದ್ದಾರೆ. ಆದರೂ ಏನೂ ಬೇಸರ ಮಾಡಿಕೊಳ್ಳದ ರಾಮಚರಣ್ ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಂಡು, ಸ್ಟೇಜ್‌ ಮೇಲೆ ಹೋಗಿ, ಖಾನ್‌ಗಳ ಜೊತೆ ಸ್ಟೆಪ್ ಹಾಕಿದ್ದಾರೆ. ಆದರೆ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗುತ್ತಿದ್ದಂತೆ, ಶಾರೂಖ್ ವಿರುದ್ಧ ರಾಮಚರಣ್ ಫ್ಯಾನ್ಸ್ ಕಿಡಿಕಾರಿದ್ದಾರೆ. ನೀವು ನಮ್ಮ ಸ್ಟಾರ್‌ಗೆ ಅವಮಾನ ಮಾಡಿದ್ದೀರಿ. ಕ್ಷಮೆಯಾಚಿಸಿ ಎಂದು ಆಗ್ರಹಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾರೂಖ್ ಮತ್ತು ರಾಮಚರಣ್ ಫ್ಯಾನ್ಸ್ ಮಧ್ಯೆ ಟಾಕ್‌ವಾರ್ ನಡೆದಿದೆ.

ಭಾರತೀಯರೆಲ್ಲರೂ ನನ್ನ ಪರಿವಾರದವರೇ: ಲಾಲೂ ಟೀಕೆಗೆ ಮೋದಿ ತಿರುಗೇಟು

ಪಾಕಿಸ್ತಾನದಲ್ಲಿ ಸುರಿದ ಧಾರಾಕಾರ ಮಳೆಗೆ 37 ಮಂದಿ ಬಲಿ

ಇಸ್ರೇಲ್‌ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ವ್ಯಕ್ತಿ ಸಾವು

- Advertisement -

Latest Posts

Don't Miss