Political News: ನಿನ್ನೆ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದ್ದು, ಎಲ್ಲ ಪಕ್ಷಗಳ ಪರಿಸ್ಥಿತಿ ಅತಂತ್ರವಾಗಿತ್ತು. ಕಾಂಗ್ರೆಸ್ ತಾನು ಪಟ್ಟಕ್ಕೇರಬೇಕು ಎಂದು, ಹಲವು ಪಕ್ಷೇತರ ಅಭ್ಯರ್ಥಿಗಳಿಗೆ ವಿವಿಧ ಆಫರ್‌ಗಳನ್ನು ನೀಡಿದ್ದರು. ಆದರೂ ಕೂಡ ಕಾಂಗ್ರೆಸ್ ಈ ಪ್ರಯತ್ನದಲ್ಲಿ ವಿಫಲರಾಗಿದ್ದು, ಗೆದ್ದ ಪಕ್ಷೇತರ ಅಭ್ಯರ್ಥಿಗಳು ಮೋದಿಯವರಿಗೆ ಬೆಂಬಲಿಸಿ, ಇಂದು ಮೋದಿ ಕರೆದ ಸಭೆಗೆ ಹಾಜರಾಗಿದ್ದರು. ಇದೀಗ ಸಭೆ ಮುಗಿದಿದ್ದು, ಮೈತ್ರಿ ಪಕ್ಷದ ನಾಯಕರು ಮೋದಿ ಪ್ರಧಾನಿಯಾಗಲಿ ಎಂದು ಒಮ್ಮತ ಸೂಚಿಸಿದ್ದಾರೆ. ಹಾಗಾಗಿ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಈ ಸಭೆ ನಡೆಸಿದ್ದು, ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಪವನ್ ಕಲ್ಯಾಣ್, ಏಕನಾಥ್ ಶಿಂಧೆ ಸೇರಿ ಹಲವು ಗೆದ್ದ ಪಕ್ಷೇತರ ಅಭ್ಯರ್ಥಿಗಳು ಭಾಗಿಯಾಗಿದ್ದರು.
ಎಲ್ಲರೂ ಈ ಬಾರಿ ಮೋದಿಯವರೇ ಪ್ರಧಾನಿಯಾಗಲಿ ಎಂದು ತಮ್ಮ ನಾಯಕನನ್ನು ಆರಿಸಿದ್ದು, ಬೆಂಬಲಿಸಿದ್ದಾರೆ. ಈ ವಾರಾಂತ್ಯದಲ್ಲಿ ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ದೆಹಲಿಯ ರಾಷ್ಟ್ರಭವನದಲ್ಲಿ ಎಲ್ಲ ತಯಾರಿ ನಡೆಸಲಾಗಿದೆ.
Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು
ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್
ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

