ಶಾಸಕ ಪ್ರಸಾದ್ ಅಬ್ಬಯ್ಯ ಫೋಟೋ ಪೋಸ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ

Hubli News: ಹುಬ್ಬಳ್ಳಿ: ಶಾಸಕ‌ ಪ್ರಸಾದ್ ಅಬ್ಬಯ್ಯ ಪೋಟೋ ಪೋಸ್ ಹೇಳಿಕೆಗೆ ಬಿಜೆಪಿ ಶಾಸಕ ತೆಂಗಿನಕಾಯಿ ತಿರುಗೇಟು ನೀಡಿದ್ದು, ಇಂತಹ ಘಟನೆ ನಡೆದಾಗ ಬಿಜೆಪಿ ತನ್ನ ಜವಾಬ್ದಾರಿಯನ್ನು ಅತ್ಯಂತ ಶಿಸ್ತು ಬದ್ಧವಾಗಿ ಮಾಡುತ್ತದೆ. ನಾವ್ಯಾರು ಇವರು ಬರಬೇಕೆಂದು ಅಪೇಕ್ಷೆ ಮಾಡಿಲ್ಲ. ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಜವಾಬ್ದಾರಿ ಅದನ್ನು ನಾವು ಮಾಡಿದ್ದೇವೆ. ಮಾನವೀಯತೆಯ ದೃಷ್ಟಿಯಿಂದ ಕುಟುಂಬದ ಜತೆಗೆ ನಾವು ನಿಂತಿದ್ದೇವೆ ತೆಂಗಿನಕಾಯಿ ಅಬ್ಬಯ್ಯಗೆ ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿ ವೀರಾಪೂರ ಓಣಿಯಲ್ಲಿ ಹತ್ಯೆಯಾದ ಅಂಜಲಿ ನಿವಾಸ ಬಳಿ ಮಾತನಾಡಿದ್ದ ಪ್ರಸಾದ್ ಅಬ್ಬಯ್ಯ,  ಕೊಲೆ ನಡೆದ ನಂತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿಲ್ಲ ಅಂತಾ ಟೀಕೆ ಮಾಡುತ್ತಿದ್ದಾರೆ. ಇಂತಹ ಘಟನೆ ನಡೆದಾಗ ಪೋಟೋ ಪೋಸ್‌ಗೆ ಬರುವ ಅವಶ್ಯಕತೆ ಇಲ್ಲ ಎಂದಿದ್ದರು.

ಮಾತು ಮುಂದುವರಿಸಿದ ಮಹೇಶ್ ಟೆಂಗಿನಕಾಯಿ, ಹು-ಧಾ ಅನ್ನು ವಾಣಿಜ್ಯ ಮತ್ತು ಸಾಂಸ್ಕ್ರತಿಕ ನಗರಿ ಎಂದು ಗುರುತಿಸಲಾಗುತಿತ್ತು. ಸಾಲು ಸಾಲು ಹತ್ಯೆಗಳಿಂದ ಎಲ್ಲಿ ಕೊಲೆಗಡುಕರ ಹಣೆ ಬಟ್ಟಿ ಬರುತ್ತೋ ಎಂಬ ಭಯ ಕಾಡುತ್ತಿದೆ. ಕಳೆದ ಏ.18ರಂದು ಬಿವಿಬಿ ಕ್ಯಾಂಪಸ್ ‌ನಲ್ಲಿ ನೇಹಾ ಹತ್ಯೆ ನಡೆಯಿತು. ಮತ್ತೆ ಮೇ.15ರಂದು ವೀರಾಪೂರ ಓಣಿಯಲ್ಲಿ ಅಂಜಲಿಯನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ. ಅಂಜಲಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಫೇಲ್ಯೂರ್ ಎದ್ದು ಕಾಣುತ್ತಿದೆ. ಹಂತಕ ಹನುಮ ಜಯಂತಿಗೂ ಮುನ್ನವೇ ಅಂಜಲಿಗೆ ಬೇದರಿಕೆ ಹಾಕಿದ್ನಂತೆ. ಇದನ್ನು ಪೊಲೀಸ್ ಠಾಣೆಗೆ ಅಂಜಲಿ ಅಜ್ಜಿ ಸಹೋದರಿಯರು ತಿಳಿಸಿದರು. ಆದರೆ ಪೊಲೀಸರು ಕ್ರಮ ಕೈಗೊಳ್ಳದೆ ಉಢಾಫೆ ಉತ್ತರ ನೀಡಿದ್ದರು. ಈಗ ಪೊಲೀಸ್ ನಿರ್ಲಕ್ಷ್ಯದಿಂದಾಗಿ ಕುಟುಂಬ ಕಣ್ಣೀರು ಹಾಕುತ್ತಿದೆ ಎಂದು ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.

ಅವಳಿನಗರದಲ್ಲಿ ಡ್ರಗ್ಸ್ ಮಾಫೀಯಾ ದೊಡ್ಡದಾಗಿ ಬೆಳೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಇದನ್ನು ತಡೆಯಲೆಂದು ಒಂದು ಠಾಣೆಯನ್ನು ನೀಡಲಾಗಿದೆ. ಆದರೆ ಅದೂ ಹುಬ್ಬಳ್ಳಿಯಲ್ಲಿ ಏನು ಮಾಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಈಗಾಲಾದ್ರೂ ಅವಳಿನಗರದಲ್ಲಿ ಸರ್ಕಾರ ಡ್ರಗ್ಸ್ ಮಟ್ಟಾ ಹಾಕುವ ನುಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಗಾಂಜಾ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳಬೇಕು. ಮಾದಕವಸ್ತುಗಳ ನಿಯಂತ್ರಿಸಿದ್ದಲ್ಲಿ ಇಂತಹ ಅಪರಾಧ ಕೃತ್ಯ ತಡೆಯಬಹುದಾಗಿದೆ. ರಾಜ್ಯ ಗೃಹ ಸಚಿವರು ಪೊಲೀಸ್ ಇಲಾಖೆ ಟೈಟ್ ಮಾಡುವ ನಿಟ್ಟಿನಲ್ಲಿ ಗಮನ ಹರುಸಬೇಕು. ಆಗ ಮಾತ್ರ ಇಲ್ಲಿ ಕ್ರೈಂ ರೇಟ್ ಕಡಿಮೆಯಾಗುವ ಸಾಧ್ಯತೆ ಇದೆ. ಈ ಕೂಡಲೇ ಗೃಹ ಸಚಿವರಾದ ಜೀ ಪರಮೇಶ್ವರವರು ಈ ಕಡೆ ಗಮನಹರಿಸುವಂತೆ ಮಹೇಶ್ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ನನ್ನ ಪಾತ್ರವಿಲ್ಲ: ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿಎಂ ಸಿದ್ದರಾಮಯ್ಯ

ಹಂತಕ ಗಿರೀಶ್ ಮೇಲೆ ಬಿತ್ತು ಮತ್ತೊಂದು ಕೇಸ್ – ಪ್ರೀತಿಯ ನೆಪದಲ್ಲಿ ಅಪ್ರಾಪ್ತಯಿಂದ ಬಂಗಾರ ದೋಚಿದ ಪಾಪಿ

About The Author