ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಅಲ್ಲವೇ ಅಲ್ಲ. ಆದ್ರೆ ಪಕ್ಷೇತರರ ಬೆಂಬಲ ಮಾತ್ರ ಕೇಳಿದೆವು ಅಂತ ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆಶೋಕ್,ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅತೃಪ್ತರ ಸಮಸ್ಯೆ ಆಲಿಸದೆ ನಿರ್ಲಕ್ಷ್ಯ ಮಾಡಿದ್ದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗಲು ಕಾರಣವಾಗಿದೆ. ಸ್ವತಃ ಅತೃಪ್ತ ಶಾಸಕರೇ ಇದನ್ನು ಹೇಳ್ತಿದ್ದಾರೆ. ಇದಕ್ಕೆ ಬಿಜೆಪಿ ಕಾರಣವಲ್ಲ ಅಂತ ಪ್ರತಿಕ್ರಿಯಿಸಿದ್ರು. ಇನ್ನು ಅತೃಪ್ತರನ್ನು ಬಿಜೆಪಿ ಸೆಳೆಯಲು ಮುಂದಾಗಿದೆಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅಶೋಕ್, ನಾವು ಈ ವರೆಗೂ ಕಾಂಗ್ರೆಸ್- ಜೆಡಿಎಸ್ ನ ಯಾವುದೇ ಶಾಸಕರ ತಂಟೆಗೆ ಹೋಗಿಲ್ಲ, ಅವರನ್ನು ಭೇಟಿ ಮಾಡಿಯೇ ಇಲ್ಲ. ಆದರೆ ನಾನು ನಿನ್ನೆ ಮುಂಬೈಗೆ ಹೋಗಿದ್ದಾಗ ಪಕ್ಷೇತರ ಶಾಸಕರಿಗೆ ಬಿಜೆಪಿ ಬೆಂಬಲಿಸುವಂತೆ ಕೇಳಿದ್ದೆ ಅಷ್ಟೆ ಅಂತ ಹೇಳಿದ್ರು. ಈ ಮೂಲಕ ಆಪರೇಷನ್ ಬಿಜೆಪಿ ಕುರಿತಾಗಿ ಕೇಳಿ ಬರುತ್ತಿರೋ ಆರೋಪಗಳನ್ನು ಶಾಸಕ ಅಶೋಕ್ ಅಲ್ಲಗಳೆದಿದ್ದಾರೆ.
ನಾನ್ಯಾಕೆ ರಾಜೀನಾಮೆ ಕೊಡ್ಬೇಕು ಅಂದ್ರು ಸಿಎಂ ಕುಮಾರಸ್ವಾಮಿ…! ಮಿಸ್ ಮಾಡದೇ ಈ ವಿಡಿಯೋ ನೋಡಿ