ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾಗೆ ಸಿಖ್ ದಂಗೆ ನೆನಪಿಸುವ ಬ್ಯಾಗ್ ಕೊಟ್ಟ ಬಿಜೆಪಿ ಸಂಸದೆ

Political News: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಪ್ಯಾಲೆಸ್ತಿನ್ ಪರ ಬೆಂಬಲ ಸೂಚಿಸಿ, ಸಂಸತ್ತಿಗೆ ಪ್ರತಿದಿನ ಹೊಸ ಹೊಸ ಬ್ಯಾಗ್ ತರುತ್ತಿದ್ದರು. ಒಂದು ದಿನ ಪ್ಯಾಲೆಸ್ತಿನ್, ಇನ್ನೊಂದು ದಿನ ಬಾಂಗ್ಲಾದೇಶದ ಪರ ಬೆಂಬಲಿಸಿ, ಬ್ಯಾಗ್ ತೆಗೆದುಕೊಂಡು ಬರುತ್ತಿದ್ದರು.

ಇದನ್ನು ಕಂಡು ಪಾಕ್ ರಾಜಕಾರಣಿ ಕೂಡ ಪ್ರಿಯಾಂಕಾ ವಾದ್ರಾಳನ್ನು ಹೊಗಳಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ನೆಹರು ಅವರ ಮೊಮ್ಮಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..? ಎಂದು ಪ್ರಿಯಾಂಕಾ ವಾದ್ರಾ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು.

ಇದೇ ಕಾರಣಕ್ಕೆ ಇಂದು ಸಂಸತ್‌ನಲ್ಲಿ ಪ್ರತಿಭಟನೆಯಲ್ಲಿ ಬ್ಯುಸಿ ಇದ್ದ ಪ್ರಿಯಾಂಕಾ ವಾದ್ರಾಗೆ, ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಸಿಖ್ ಹತ್ಯಾಕಾಂಡ ನೆನಪಿಸುವ ಬ್ಯಾಗ್ ನೀಡಿದ್ದಾರೆ. ಆದರೆ ಪ್ರಿಯಾಂಕಾ ಆ ಬ್ಯಾಗ್‌ ಮೇಲೆ ಏನು ಬರೆದಿದೆ ಎಂದು ನೋಡದೇ, ಬ್ಯಾಗ್ ತೆಗೆದುಕೊಂಡು ಸುಮ್ಮನೆ ಮುನ್ನಡೆದಿದ್ದಾರೆ.

1984 ಎಂದು ಅದರ ಮೇಲೆ ರಕ್ತದ ಕಲೆಯಾಗಿರುವಂತೆ ಕೆಪ್ಪು ಬಣ್ಣದಿಂದ ಬರೆಯಲಾಗಿದೆ. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಬ್ಯಾಗ್ ಮೂಲಕ ಗಮನ ಸೆಳೆಯುತ್ತಿರುವುದನ್ನು ಕಂಡು, ತಾವು ಅವರಿಗಾಗಿ ಈ ಬ್ಯಾಗನ್ನು ಸ್ಪೆಶಲ್ ಆಗಿ ಸಿದ್ಧಪಡಿಸಿ, ತಂದಿದ್ದೇನೆ ಎಂದು ಅಪರಾಜಿತಾ ಹೇಳಿದ್ದಾರೆ.

ಇಂದಿರಾ ಗಾಂಧಿ ಹತ್ಯೆಯ ಬಳಿಕ, ದೆಹಲಿಯಲ್ಲಿ ದಂಗೆ ಆರಂಭವಾಯಿತು. ಕಾಂಗ್ರೆಸ್ ಅಸಮಾಧಾನದ ಪ್ರತೀಕವಾಗಿ ಈ ಜಗಳವಾಗಿದ್ದು, ಇದರಲ್ಲಿ ಸಾವಿರಾರು ಸಿಖ್ಕರು ತಮ್ಮ ಪ್ರಾಣ ತ್ಯಾಗ ಮಾಡಿದರು. ಪ್ಯಾಲೆಸ್ತಿನ್, ಬಾಂಗ್ಲಾದೇಶಿಗರ ಹತ್ಯೆಯ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಪ್ರಿಯಾಂಕಾ, ಸಿಖ್ ಹತ್ಯಾಕಾಂಡದ ಬಗ್ಗೆ ಗಮನ ಸೆಳೆಯಲಿ ಎಂದು ಅಪರಾಜಿತಾ ಹೇಳಿದ್ದಾರೆ.

About The Author