- Advertisement -
ತುಮಕೂರು: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದು ಗಂಗಾ ಮಾತೆಯ ಶಾಪದಿಂದ ಅಂತ ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸಂಸದ ಬಸವರಾಜು, ದೇವೇಗೌಡರನ್ನು ಸೋಲಿಸಿದ್ದ ನಾನಲ್ಲ. ಅವರನ್ನು ಗಂಗಾ ಮಾತೆಯ ಶಾಪವೇ ಸೋಲುವಂತೆ ಮಾಡಿತು ಅಂತ ಹೇಳಿದ್ರು. ಅಲ್ಲದೆ ದೇವೇಗೌಡರು ವಯೋವೃದ್ಧರು, ಹಾಸನಕ್ಕೆ ಮಣ್ಣಿನ ಮಗ, ತುಮಕೂರಿಗಲ್ಲ ಅಂತ ಬಸವರಾಜು ಇದೇ ವೇಳೆ ಕಾಲೆಳೆದ್ರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸ್ವಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಾಗೆ ಬಿಟ್ಟುಕೊಟ್ಟು ತುಮಕೂರಿನಲ್ಲಿ ಬಿಜೆಪಿಯ ಜಿ.ಎಸ್ ಬಸವರಾಜು ವಿರುದ್ಧ ಸ್ಪರ್ಧಿಸಿ ಹೀನಾಯವಾಗಿ ಸೋಲನುಭವಿಸಿದ್ರು.
ಸಾಹುಕಾರನ ಆಸ್ತಿ ಹರಾಜಿಗೆ ಬರೋದಕ್ಕೆ ಕಾರಣವೇನು..?ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -