ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿಗಾಗಿ ಆರ್.ಅಶೋಕ್‌ರನ್ನ ನಿಲ್ಲಿಸಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣರಿಗೆ ಬಿಜೆಪಿ ಟಿಕೇಟ್ ಕೊಡಲಾಗಿದೆ. ಇನ್ನು ಚೆನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದಾರೆ.
ಸೋಮಣ್ಣ, ತಮ್ಮ ಮಗನಿಗೆ ಈ ಬಾರಿ ಟಿಕೇಟ್ ಕೊಡದಿದ್ದಲ್ಲಿ, ನಾನೂ ಕೂಡ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದರು. ಆದ್ರೆ ಅವರಿಗೆ ಬುದ್ಧಿ ಹೇಳಿದ್ದ ಹೈಕಮಾಂಡ್, ಈ ಬಾರಿ ನೀವು ಚುನಾವಣೆಗೆ ನಿಲ್ಲಲೇಬೇಕು ಎಂದು ಹೇಳಿತ್ತು. ಅದೇ ಪ್ರಕಾರವಾಗಿ ವಿ ಸೋಮಣ್ಣಗೆ ಡಬಲ್ ಧಮಾಕಾ ಕೊಡಲಾಗಿದೆ. ಚಾಮರಾಜ ನಗರದ ಜೊತೆ ವರುಣಾದಲ್ಲೂ ಬಿಜೆಪಿ ಟಿಕೇಟ್ ಘೋಷಣೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯರನ್ನ ಕಟ್ಟಿ ಹಾಕಲು ಬಿಜೆಪಿ ಸೋಮಣ್ಣರಿಗೆ ಟಿಕೇಟ್ ನೀಡಿದೆ.
ಇನ್ನು ಕನಕಪುರ ಬಂಡೆಯನ್ನು ಅಲ್ಲಾಡಿಸಲು ಕೂಡ ಬಿಜೆಪಿ ಬ್ರಹ್ಮಾಸ್ತ್ರ ಬಳಸಿದ್ದು, ಆರ್. ಅಶೋಕ್‌ರನ್ನ ನಿಲ್ಲಿಸಲಾಗಿದೆ. ಕನಕಪುರದಲ್ಲಿ ಒಕ್ಕಲಿಗರಿಗೆ ಉತ್ತಮ ಸಪೋರ್ಟ್ ಇರುವ ಕಾರಣ ಆರ್. ಅಶೋಕ್‌ರನ್ನ ಕಣಕ್ಕಿಳಿಸಲಾಗಿದೆ. ಹಾಗಾಗಿ ಕನಕಪುರದ ಜೊತೆ ಪದ್ಮನಾಭನಗರದಲ್ಲಿ ಅಶೋಕ್ ಚುನಾವಣೆಗೆ ನಿಲ್ಲಲಿದ್ದಾರೆ.