Saturday, July 27, 2024

Latest Posts

ಹೆಸರು ಬೇಳೆ ಪಕೋಡಾ ರೆಸಿಪಿ..

- Advertisement -

ನೀವು ಕಡಲೆ ಹಿಟ್ಟು ಬಳಸಿ ತಯಾರಿಸಿದ ಹಲವು ರೀತಿಯ ಪಕೋಡಾ, ಬಜ್ಜಿಗಳನ್ನ ತಿಂದಿದ್ದೀರಿ. ಆದ್ರೆ ಇಂದು ನಾವು ಕಡಲೆ ಹಿಟ್ಟು ಬಳಸದೇ, ಹೆಸರು ಬೇಳೆ ಬಳಸಿ, ರುಚಿಯಾದ ಪಕೋಡಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸಲು ಏನೇನು ಸಾಮಗ್ರಿ ಬೇಕು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು ಬೇಳೆ, ಚಿಕ್ಕ ತುಂಡು ಶುಂಠಿ, 3 ಹಸಿಮೆಣಸು, ಅರ್ಧ ಚಮಚ ಜೀರಿಗೆ, ಕೊಂಚ ಕೊತ್ತೊಂಬರಿ ಸೊಪ್ಪು, ಕೊಂಚ ತರಿತರಿಯಾಗಿ ಪುಡಿ ಮಾಡಿದ ಕಾಳು ಮೆಣಸು, 1 ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಹೆಸರು ಬೇಳೆಯನ್ನ ,ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ 2 ಗಂಟೆ ನೆನೆಸಿಡಿ. ಇದಾದ ಬಳಿಕ ಹೆಸರು ಬೇಳೆಗೆ, ಹಸಿಮೆಣಸು, ಹಸಿ ಶುಂಠಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ವಡೆ ಹಿಟ್ಟಿನ ಹದಕ್ಕೆ ಇರಲಿ. ಈಗ ಇದಕ್ಕೆ ಉಪ್ಪು, ಜೀರಿಗೆ, ಖಾರದ ಪುಡಿ, ಕೊತ್ತೊಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ, ಇವೆಲ್ಲವನ್ನೂ ಹಾಕಿ ಕೊಂಚ ಹೊತ್ತು ಬಿಡಿ. ಈಗ ವಿಸ್ಕರ್ ಸಹಾಯದಿಂದ ಕೊಂಚ ವಿಸ್ಕ್ ಮಾಡಿ. ನಂತರ ಕಾದ ಎಣ್ಣೆಯಲ್ಲಿ ಬಜ್ಜಿ ಕರಿಯಿರಿ.

ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

- Advertisement -

Latest Posts

Don't Miss