Friday, December 13, 2024

Latest Posts

‘ಸಚಿವರು ರಾಜೀನಾಮೆ ನೀಡಿರೋವಾಗ ಸದನ ಹೇಗೆ ನಡೆಯುತ್ತೆ..?’- ಸ್ಪೀಕರ್ ಗೆ ಬಿಜೆಪಿ ಪ್ರಶ್ನೆ

- Advertisement -

ಬೆಂಗಳೂರು: ಅತೃಪ್ತರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಅವರನ್ನು ಸೆಳೆಯೋ ಸಲುವಾಗಿ ಸಚಿವರ ಸಾಮೂಹಿಕ ರಾಜೀನಾಮೆ ತೆಗೆದುಕೊಂಡಿದ್ದ ಮೈತ್ರಿ ನಾಯಕರ ನಡೆ ಕುರಿತು ಬಿಜೆಪಿ ಸ್ಪೀಕರ್ ರಮೇಶ್ ಕುಮಾರ್ ರನ್ನು ಪ್ರಶ್ನಿಸಿದೆ. ಸಚಿವರು ರಾಜೀನಾಮೆ ನೀಡಿರೋವಾಗ ಸದನ ಹೇಗೆ ನಡೆಯುತ್ತೆ ಅಂತ ಬಿಜೆಪಿ ಪ್ರಶ್ನಿಸಿದೆ.

ಜೆಡಿಎಸ್-ಕಾಂಗ್ರೆಸ್ ಶಾಸಕ ರಾಜೀನಾಮೆ ಇಂದ ಸರ್ಕಾರ ಇಂದು ಪತನವಾಗುತ್ತೆ, ನಾಳೆ ಪತನವಾಗುತ್ತೆ ಅಂತ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿರೋ ಬಿಜೆಪಿ ಮತ್ತಷ್ಟು ಪ್ರಶ್ನೆಗಳನ್ನಿಟ್ಟುಕೊಂಡು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ರವರನ್ನು ಭೇಟಿ ಾಡಿದೆ.

ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆ ಗೊಂದಲದಲ್ಲಿರೋ ಬಿಜೆಪಿ, ದಿನೇ ದಿನೇ ಮೈತ್ರಿ ಕುರಿತಾಗಿ ನಾನಾ ಪ್ರಶ್ನೆಗಳನ್ನು ಕೇಳುತ್ತಿದೆ. ಇಂದು ಸ್ಪೀಕರ್ ರಮೇಶ್ ಕುಮಾರ್ ರನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗ, ಇಂದಿನ ಪ್ರಶ್ನಾವಳಿ ಚರ್ಚೆಗೆ ವಿರೋಧ ವ್ಯಕ್ತಪಡಿಸಲಿದೆ. ಇನ್ನು ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ ಅಂತ ಖುದ್ದು ಸಚಿವರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳ್ತಿದ್ದಾರೆ. ಹೀಗಿರೋವಾಗ ಅಧಿವೇಶನದಲ್ಲಿ ಪ್ರಶ್ನಾವಳಿಗಳಿಗೆ ಉತ್ತರಿಸೋರ್ಯಾರು ಅಂತ ಪ್ರಶ್ನಿಸಿರೋ ಬಿಜೆಪಿ, ರಾಜೀನಾಮೆ ನೀಡದ ಮೇಲೆ ಸದನ ಹೇಗೆ ನಡೆಯುತ್ತೆ ಅಂತ ಸ್ಪೀಕರ್ ರನ್ನು ಪ್ರಶ್ನಿಸಿದೆ.

ಆದ್ರೆ ಈ ಎಲ್ಲಾ ಪ್ರಶ್ನೆ, ಗೊಂದಲಗಳ ಮಧ್ಯೆ ತನ್ನ ಕಾರ್ಯಚಟುವಟಿಕೆಗಳನ್ನು ಆರಾಮಾಗಿ ನಡೆಸುತ್ತಿರೋ ಮೈತ್ರಿ ನಾಯಕರು, ವಿಧಾನಸಭಾ ಕಾರ್ಯಕಲಾಪಗಳ ಪಟ್ಟಿ ಸಿದ್ಧಪಡಿಸಿದ್ದು, ಪ್ರಶ್ನೋತ್ತರ ಕಲಾಪ, ಇಲಾಖಾವಾರು ಬೇಡಿಕೆಗಳ ಮಂಡನೆ, ಶಾಸನ ರಚನೆ ಸೇರಿದಂತೆ ಕೆಲ ವಿಧಾಯಕಗಳನ್ನು ಮಂಡಿಸಲಿದೆ ಅಂತ ಹೇಳಲಾಗ್ತಿದೆ.

ದೋಸ್ತಿಗಳಿಗೆ ಮತ್ತೆ ಬಿಗ್ ಶಾಕ್…! ಮತ್ತಷ್ಟು ಶಾಸಕರ ರಾಜೀನಾಮೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=UUqmCF9h4ng

- Advertisement -

Latest Posts

Don't Miss