Sunday, October 13, 2024

Latest Posts

ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದ್ರೆ 10 ಸಾವಿರ ದಂಡ- ಕೇಂದ್ರ ಎಚ್ಚರಿಕೆ..!

- Advertisement -

ನವದೆಹಲಿ: ದೊಡ್ಡ ಮೊತ್ತದ ವಹಿವಾಟು ನಡೆಸುವಾಗ ಅಪ್ಪಿ ತಪ್ಪಿ ನೀವೇನಾದ್ರೂ ನಿಮ್ಮ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ. ಯಾಕಂದ್ರೆ ಹೀಗೆ ಮಾಡಿದ್ರೆ ನೀವು 10ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತೆ.

ಈ ಬಾರಿಯ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪಾನ್ ಕಾರ್ಡ್ ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ಬಳಸಬಹುದು ಅಂತ ಘೋಷಣೆ ಮಾಡಿದ್ರು. ಇದು ದೊಡ್ಡ ಮೊತ್ತದ ವಹಿವಾಟುಗಳನ್ನು ನಡೆಸೋದಕ್ಕೂ ಅನ್ವಯವಾಗಲಿದೆ ಅಂತ ಹೇಳಿದ್ರು. ಆದರೆ ಇದಕ್ಕೆ ನಿರ್ಮಲಾ ಮೇಡಂ ಒಂದು ಷರತ್ತು ವಿಧಿಸಿದ್ದಾರೆ.

ಹೌದು, ಭೂಮಿ, ಕಾರು, ಸೇರಿದಂತೆ ದುಬಾರಿ ವಸ್ತುಗಳ ಖರೀದಿ ವೇಳೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವಾಗ ತಪ್ಪು ಮಾಡಿದ್ರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತೆ ಅಂತ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಾಗಿ ಶೀಘ್ರವೇ ತಿದ್ದುಪಡಿಯಾಗಲಿದ್ದು, ಸೆಪ್ಟಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡುತ್ತಿರುವವರ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತರಲು ನಿರ್ಧಾರ ಮಾಡಿದೆ.

ಹೀಗಾಗಿ ಇನ್ನು ಮುಂದೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸೋ ವೇಳೆ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇಲ್ಲದಿದ್ರೆ, ಎಷ್ಟು ಬಾರಿ ತಪ್ಪು ಮಾಡ್ತೀರೋ ಅಷ್ಟೂ ಬಾರಿಯೂ 10ಸಾವಿರ ದಂಡ ಗ್ಯಾರೆಂಟಿ.

ರೈಲ್ವೆಯಲ್ಲಿ 2 ಲಕ್ಷ 94 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ..! ಮಿಸ್ ಮಾಡದೇ ಅರ್ಜಿ ಹಾಕಿ, ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=cAjt3YWW7yY
- Advertisement -

Latest Posts

Don't Miss