- Advertisement -
ಲೋಕಸಭಾ ಮಹಾಸಮರದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ ಇದೀಗ 2ನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಒಟ್ಟು 542 ಕ್ಷೇತ್ರಗಳಲ್ಲಿ ಎನ್ ಡಿಎ 300ಕ್ಕೂ ಹೆಚ್ಚು ಸ್ಥಾನ ಗೆದ್ದರೆ, ಕರ್ನಾಟಕದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜಾತ್ಯತೀತ ಎಂಬ ಬ್ಯಾಡ್ಜ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವರಿಗೆ ಜನರು ಸರಿಯಾದ ಪಾಠಕಲಿಸಿದ್ದಾರೆ ಅಂತ ಹೇಳಿದ್ದಾರೆ.
ನಂತರ ಮಾತನಾಡಿದ ನರೇಂದ್ರ ಮೋದಿ, ಬಿಜೆಪಿಯ ಈ ಅಭೂತಪೂರ್ವ ಜಯ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪಾದಗಳಿಗೆ ಅರ್ಪಿಸುತ್ತೇನೆ ಅಂತ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ತಮ್ಮ ಉಸಿರಿರೋವರೆಗೂ ಯಾವುದೇ ಸ್ವಾರ್ಥವಿಲ್ಲದೆ ಪ್ರತಿ ಕ್ಷಣವೂ ಭಾರತಮಾತೆಯ ಸೇವೆ ಮಾಡುತ್ತೇನೆ ಅಂತ ಹೇಳಿದ್ರು.
- Advertisement -