Political News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಕಾಲ್ತುಳಿತ ಸಂಭವಿಸಿ, ಹಲವರು ಮೃತಪಟ್ಟಿದ್ದರು. ಹೀಗೆ ಮೃತಪಟ್ಟವರ ಮೃತದೇಹವನ್ನು ನದಿಗೆ ಎಸೆಯಲಾಗಿದೆ ಎಂದು ಸಮಾಜವಾಾದಿ ಪಾರ್ಟಿ ಸಂಸದೆ, ನಟಿ ಜಯಾಬಚ್ಚನ್ ಆರೋಪಿಸಿದ್ದಾರೆ.
ಈಗ ದೇಶದ ಅತ್ಯಂತ ಕಲುಶಿತ ನೀರು ಎಲ್ಲಿದೆ ಎಂದು ಕೇಳಿದರೆ, ಎಲ್ಲರ ಬಾಯಲ್ಲೂ ಬರುವ ಉತ್ತರ ಕುಂಭ ಮೇಳ ನಡೆಯುತ್ತಿರುವ ಸ್ಥಳದಲ್ಲಿ ಅಂತ ಹೇಳುತ್ತಾರೆ. ಏಕೆಂದರೆ, ಕಾಲ್ತುಳಿತ ಸಂಭವಿಸಿ ಮೃತಪಟ್ಟವರ ಮೃತದೇಹವನ್ನು ಆ ನದಿಗೆ ಎಸೆಯಲಾಗಿದೆ ಎಂದು ಜಯಾ ಬಚ್ಚನ್ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಮಹಾಕುಂಭ ಮೇಳಕ್ಕೆ ಬರುವವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಅವರ ಆರೋಗ್ಯ ಹದಗೆಟ್ಟರೆ, ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. 34 ಕೋಟಿ ಜನ ಬರುತ್ತಿದ್ದಾರೆಂದು ಲೆಕ್ಕ ಹೇಳುತ್ತಾರೆ. ಆದರೆ ಒಂದೇ ಸ್ಥಳದಲ್ಲಿ ಇಷ್ಟು ಕೋಟಿ ಜನ ಬರಲು ಹೇಗೆ ಸಾಧ್ಯ..? ಉತ್ತರಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಜಯಾಬಚ್ಚನ್ ಆರೋಪಿಸಿದ್ದಾರೆ.
ಅಲ್ಲದೇ, ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿರುವ ಬಡವರಿಗೆ,ಮಧ್ಯಮ ವರ್ಗದವರಿಗೆ ಯಾವುದೇ ಸರಿಯಾದ ಸೌಲಭ್ಯವಿಲ್ಲ. ಎಲ್ಲ ಸೌಲಭ್ಯ ವಿಐಪಿಗಳಿಗೆ ಮಾತ್ರ ಸಿಗುತ್ತಿದೆ ಎಂದು ಜಯಾಾ ಬಚ್ಚನ್ ಆರೋಪಿಸಿದ್ದಾರೆ.