ಮೊದಲೆಲ್ಲ ದೇಹದ ತೂಕ ಇಳಿಸಿಕೊಳ್ಳುವುದು ಅಪರೂಪವಾಗಿತ್ತು. ಆರೋಗ್ಯಕರ ಊಟ ಸೇವಿಸಿ, ಹಣ್ಣಿನ ರಸ, ತರಕಾರಿ ಹಣ್ಣು ಹಂಪಲು ತಿಂದು ತೂಕ ಇಳಿಸಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿಗೆ ಡಯಟ್ ಅನ್ನೋದು ಫ್ಯಾಷನ್ ಆಗಿಬಿಟ್ಟಿದೆ. ಮನಸ್ಸಿಗೆ ಬಂದಂತೆ ಡಯಟ್ ಮಾಡಿ, ಎಡವಟ್ಟು ಮಾಡಿಕೊಳ್ಳುವವರೇ ಹೆಚ್ಚು. ಇಂಥ ಘಟನೆಯೊಂದು ನಡೆದಿದ್ದು ನಟಿಯೊಬ್ಬರು ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಮಿಸ್ತಿ ಮುಖರ್ಜಿ(27) ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ದಿನಗಳಿಂದ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದ ಮಿಸ್ತಿ, ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇನ್ನು ಮಿಸ್ತಿ ಸಹೋದರ ಹೇಳುವ ಪ್ರಕಾರ, ಮಿಸ್ತಿ ಕೆಟೋ ಡಯಟ್ ಮಾಡುತ್ತಿದ್ದರಂತೆ. ಫ್ಯಾಟ್ ಪದಾರ್ಥಗಳನ್ನ, ಪ್ರೋಟಿನ್ ತುಂಬಿದ ಆಹಾರವನ್ನ ಹೆಚ್ಚು ತಿಂದು, ಕಾರ್ಬೋಹೈಡ್ರೇಟ್ ಕಡಿಮೆ ಸೇವನೆ ಮಾಡುವುದನ್ನ ಕೆಟೋ ಡಯಟ್ ಎನ್ನುತ್ತಾರೆ. ಈ ಡಯಟ್‌ನ್ನ ಸರಿಯಾದ ರೀತಿಯಲ್ಲಿ ಮಾಡಬೇಕು. ಮತ್ತು ಈ ಡಯಟ್ ಮಾಡುವವರಲ್ಲಿ ಕೆಲವರ ಕಿಡ್ನಿ ಮೇಲೂ ಕೂಡ ಹೊಡೆತ ಬೀಳುವ ಸಂಭವವಿರುತ್ತದೆ. ಇದೇ ಕಾರಣಕ್ಕೆ ಮಿಸ್ತಿ ಕಿಡ್ನಿ ಕೂಡ ವೈಫಲ್ಯವಾಗಿತ್ತು. ಚಿಕಿತ್ಸೆ ಫಲಿಸದೇ ಮಿಸ್ತಿ ಸಾವನ್ನಪ್ಪಿದ್ದಾರೆ.
ಇನ್ನು ಮಿಸ್ತಿ ಬಾಲಿವುಡ್‌ನ ಮೈ ಕೃಷ್ಣ ಹೋಂದಿ, ಲೈಫ್ ಕೀ ತೋ ಲಗ್ ಗಯಿ ಸಿನಿಮಾದಲ್ಲಿ ಮಿಸ್ತಿ ನಟಿಸಿದ್ದಾರೆ.

