Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ದರೋಡೆ ಮಾಡಲು ನುಗ್ಗಿದ ದರೋಡೆಕೋರ, ಸೈಫ್‌ಗೆ ಚಾಕು ಇರಿದು, ಪರಾರಿಯಾಗಿದ್ದಾನೆ. ಸದ್ಯ ಸೈಫ್ ಪರಿಸ್ಥಿತಿ ಗಂಭೀರವಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೈಫ್‌ರನ್ನು ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ನುಗ್ಗಿದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು, ಸೈಫ್ ದೇಹದ 6 ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ, ಹೊಟ್ಟೆ ಭಾಗಗಳಿಗೆ ಇರಿದಿದ್ದು, ತಕ್ಷಣ ಸೈಫ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ರಾತ್ರಿ 2 ಗಂಟೆಗೆ ನಡೆದಿದ್ದು, 3 ಗಂಟೆಯಿಂದಲೂ ಸೈಫ್‌ಗೆ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸೈಫ್ ಅಲಿ ಖಾನ್ ಮಾತ್ರ ದರೋಡೆಕೋರನಿಂದ ಹಲ್ಲೆಗೊಳಗಾಗಿದ್ದು, ಕರೀನಾ ಹೇಗೆ ಬಚಾವಾದ್ರೂ ಅನ್ನೋ ಪ್ರಶ್ನೆಗೆ ಉತ್ತರ, ಅವರು ಅಂದು ರಾತ್ರಿ ಕರಿಶ್ಮಾ ಸೇರಿ ಹಲವರ ಜೊತೆ ಗರ್ಲ್ಸ್ ನೈಟ್ ಪಾರ್ಟಿಗೆ ತೆರಳಿದ್ದರು. ಹಾಗಾಗಿ ಸೈಫ್ ಒಬ್ಬರೇ ಮನೆಯಲ್ಲಿದ್ದರು. ಮನೆಯಲ್ಲಿ ಕೆಲಸದವರೂ ಇದ್ದು, ಅವರು ಕೂಡ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅವರಿಗೂ ಸಣ್ಣ ಪುಟ್ಟ ಗಾಯಗಳಾಾಗಿರುವ ಸಾಧ್ಯತೆ ಇದೆ. ಆ ಬಗ್ಗೆ ಯಾವುದೇ ವರದಿಯಾಗಿಲ್ಲ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ದರೋಡೆಕೋರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.