Bollywood News: ಇತ್ತೀಚೆಗಷ್ಟೇ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವಂತೆ ಮಾಡಿದ್ದು ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ. ಸದ್ಯ ಸೈಫ್ ಅಲಿಖಾನ್ ಅವರು ಸೇಪ್. ಅದೇನೋ ಗೊತ್ತಿಲ್ಲ. ಅವರ ಗ್ರಹಗತಿಗಳು ಹೇಗಿವೆಯೋ ಏನೋ. ಆದರೆ, ಅವರನ್ನು ಒಂದೊಂದೇ ಗ್ರಹಚಾರಗಳು ಸುತ್ತುವರೆಯುತ್ತಿರುವುದಂತೂ ಸುಳ್ಳಲ್ಲ. ಹೌದು, ಸದ್ಯ ಅವರ ಹಣೆಬರಹಕ್ಕೆ ಗ್ರಹಗತಿಗಳು ಕಾರಣವಿರಬಹುದೇನೋ?
ಇಷ್ಟಕ್ಕೂ ಸೈಫ್ ಮತ್ಯೆ ಯಾವ ಗ್ರಹಚಾರಕ್ಕೆ ಸಿಲುಕಿದ್ರು ಅನ್ನೋ ಪ್ರಶ್ನೆ ಕಾಡಬಹುದು. ಯೆಸ್. ಅವರು ಮೊನ್ನೆಯಷಟೇ ಚಾಕು ಇರಿತಕ್ಕೆ ಒಳಗಾಗಿ, ಆಸ್ಪತ್ರೆಗೆ ಸೇರಿ ಸದ್ಯ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಬೆನ್ನಲ್ಲೇ ಅವರಿಗೊಂದು ಶಾಕ್ ಎದುರಾಗಿದೆ. ಹೌದು, ಮಧ್ಯ ಪ್ರದೇಶದ ಹೈಕೋರ್ಟ್ ಇದೀಗ ಸೈಫ್ ಅಲಿಖಾನ್ ಅವರ ನೆಮ್ಮದಿಯನ್ನು ಕಸಿದುಕೊಂಡಿದೆ. ಇಷ್ಟಕ್ಕೂ ನೆಮ್ಮದಿ ಕಸಿದುಕೊಂಡಿದ್ದಕ್ಕೆ ಕಾರಣ 15 ಸಾವಿರ ಕೋಟಿ. ಹೌದು, ಅಷ್ಟೊಂದು ಕೋಟಿ ರೂ. ಆಸ್ತಿಯ ಮೇಲಿನ ತಡೆಯಾಜ್ಞೆಯನ್ನು ಹೈ ಕೋರ್ಟ್ ತೆರವುಗೊಳಿಸಿದೆ. ಸದ್ಯ ಸೈಫ್ ಅಲಿಖಾನ್ ಗೆ ಇದು ಬಿಗ್ ಶಾಕ್ ಕೊಟ್ಟಿದೆ.
ಏನದು ಹದಿನೈದು ಸಾವಿರ ಕೋಟಿಯ ವಿಷಯ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಭೋಪಾಲ್‌ನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಭವ್ಯವಾದ ಅರಮನೆಯೊಂದು ಇದೆ. ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದು ಅದೇ ಅರಮನೆಯಲ್ಲಿ. 15 ಸಾವಿರ ಕೋಟಿ ಮೌಲ್ಯದ ಈ ಅರಮನೆಯನ್ನು 1935ರಲ್ಲಿ ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ ಖಾನ್ ನಿರ್ಮಿಸಿದ್ದರು. ಆದರೆ, 1947ರ ವಿಭಜನೆಯ ನಂತರ ನವಾಬ್ ಹಮೀದುಲ್ಲಾ ಖಾನ್ ತಮ್ಮ ಈ ಆಸ್ತಿಯನ್ನು ತೊರೆದು 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು. ಈ ಸಮಯದಲ್ಲಿ ನವಾಬ್ ಹಮೀದುಲ್ಲಾ ಖಾನ್ ಅವರ ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬ ಮಗಳಾದ ಅಬಿದಾ ಸುಲ್ತಾನ್ ತಂದೆ ಜೊತೆ ಪಾಕಿಸ್ತಾನಕ್ಕೆ ತೆರಳಿದರೆ, ನವಾಬ್ ಇಫ್ತಿಕರ್ ಅಲಿ ಪಟೌಡಿಯನ್ನು ಮದುವೆಯಾಗಿದ್ದ ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡರು. ಕಾನೂನು ಬದ್ದವಾಗಿ ಆಸ್ತಿಗಳ ಉತ್ತರಾಧಿಕಾರಿಯಾಗಿಬಿಟ್ಟರು. 2019ರಲ್ಲಿ ನ್ಯಾಯಾಲಯ ಕೂಡ ಸಾಜಿದಾ ಸುಲ್ತಾನ್ ಅವರೇ ಈ ಆಸ್ತಿಯ ಉತ್ತರಾಧಿಕಾರಿಯೆಂದು ಹೇಳಿತ್ತು. ಆಸ್ತಿಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಕೂಡ ಪಾಲನ್ನು ನೀಡಿತ್ತು.
ಆದರೆ, ಆ ಬಳಿಕ ಸಾಜಿದಾ ಅವರ ಅಕ್ಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಕಾರವೆತ್ತಿತ್ತು. 1968ರ ಶತ್ರು ಆಸ್ತಿ ಕಾಯ್ದೆ ಅಡಿ ಈ ಆಸ್ತಿ ಬರುತ್ತೆ ಎಂದು ವಾದವನ್ನು ಮಾಡಿತ್ತು. ಈ ಕಾಯ್ದೆಯ ಅಡಿ ಭಾರತ ಮತ್ತು ಪಾಕಿಸ್ಥಾನದ ವಿಭಜನೆಯ ನಂತರ ಭಾರತವನ್ನು ತೊರೆದು ಹೋದವರ ಮೇಲೆ ಸರ್ಕಾರದ ಹಕ್ಕು ಮಾತ್ರ ಇರುತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಕೈಕೋರ್ಟ್‌ಗೆ ಸೈಫ್ ಅಲಿ ಖಾನ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಆದರೆ, ಈಗ ಈ ತಡೆಯಾಜ್ಞೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರ್ ವಾಲ್ ಅವರ ಏಕ ಸದಸ್ಯ ಪೀಠ ತೆರವುಗೊಳಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಆಸ್ತಿಯನ್ನು ವಶಕ್ಕೆ ಪಡೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಸೈಫ್ ಅಲಿ ಖಾನ್ ಸುಪ್ರಿಂ ಕೋರ್ಟ್‌ನ ಮೆಟ್ಟಿಲು ಏರದಿದ್ದರೆ ಈ 15 ಸಾವಿರ ಕೋಟಿ ಆಸ್ತಿ ಕೇಂದ್ರ ಸರ್ಕಾರದ ಪಾಲಾಗುವುದು ಖಚಿತ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಹೈಕೋರ್ಟ್‌ನ ಆದೇಶದ ಕುರಿತು ಸೈಫ್ ಅಲಿ ಖಾನ್ ಇನ್ನು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಅದೇನೆ ಇರಲಿ, ಚಾಕು ಇರಿತದಿಂದ ಪಾರಾದ ಸೈಫ್ ಸೇಫ್ ಆಗಿದ್ದೇನೋ ನಿಜ. ಆದರೆ ಇದೀಗ ಹದಿನೈದು ಸಾವಿರ ಕೋಟಿ ರೂ. ಉಳಿಸಿಕೊಳ್ಳೋಕು ಮತ್ತೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎಷ್ಟೇ ಆಗಲಿ, ಪಟೌಡಿ ಫ್ಯಾಮಿಲಿಯ ಕುಡಿ ಸೈಫ್ ಆಸ್ತಿ ಉಳಿಸಿಕೊಳ್ಳಲೇಬೇಕಾದ ಸಂದಿಗ್ಧ ಸ್ಥಿತಿ ಎದುರಾಗಿದೆ. ಅತ್ತ ಪ್ರಾಣ ಉಳಿಸಿಕೊಂಡಿರುವ ನಟ, ಇತ್ತ ಆಸ್ತಿ ಉಳಿಸಿಕೊಳ್ಳಬೇಕಾಗಿರೋದು ಅನಿವಾರ್ಯವಾಗಿದೆ.
ವಿಜಯ್ ಭರಮಸಾಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ