Friday, April 11, 2025

Latest Posts

Bollywood News: ಬಾಲಿವುಡ್ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

- Advertisement -

Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು ಸಂಜೆ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ.

ಶಾಮ್ ಬೆನಗಲ್ ಅವರಿಗೆ 18 ಬಾರಿ ನ್ಯಾಷನಲ್ ಅವಾರ್ಡ್ ದೊರಕಿದೆ. ದಾದಾ ಸಾಹೇಬ್ ಫಾಲ್ಕೆ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸಹ ಶಾಮ್ ಅವರಿಗೆ ದೊರಕಿದೆ. ಕನ್ನಡಿಗರಾದ ಅನಂತ್ ನಾಗ್, ಗರೀಶ್ ಕಾರ್ನಾಡ್ ಜೊತೆ ಕೂಡ ಶಾಮ್ ಬೆನಗಲ್ ಕೆಲಸ ಮಾಡಿದ್ದಾರೆ. ಬೆನಗಲ್ ಅವರಿಗೆ ಭಾರತ ಸರ್ಕಾರ 1976 ರಲ್ಲಿ ಪದ್ಮಶ್ರೀ ಮತ್ತು 1991 ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು. ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಮಂಥನ್, ಜುಬೇದಾ ಮತ್ತು ಸರ್ದಾರಿ ಬೇಗಂ ಸೇರಿವೆ.

ಡಿಸೆಂಬರ್ 14ರಂದು ಇವರ ಜನ್ಮದಿನವಾಗಿದ್ದು, ಸ್ನೇಹಿತರು, ಸಂಬಂಧಿಕರ ಜೊತೆ ಶಾಮ್ ಬೆನಗಲ್ ವಾರದ ಹಿಂದೆಯಷ್ಟೇ ತಮ್ಮ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು. ಆದರೆ ಇಂದು ಬೆನಗಲ್ ಕೊನೆಯುಸಿರೆಳೆದಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.

- Advertisement -

Latest Posts

Don't Miss