Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಯ ದರೋಡೆ ಪ್ರಕರಣವನ್ನು, ಕರ್ನಾಟಕ ಮೂಲಕ ಎನ್‌ಕೌಂಟರ್ ಸ್ಪೆಶಲಿಸ್ಟ್ ಎನಕೌಂಟರ್ ದಯಾನಾಯಕ್ ಕೈಗೆತ್ತಿಕೊಂಡಿದ್ದಾರೆ.
ಹೊಟೇಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್‌ಕೌಂಟರ್ ದಯಾನಾಯಕ್, ತಂಬಾ ಆ್ಯಕ್ಟೀವ್ ಮನುಷ್ಯ. ಈತ ಅರ್ಧಕ್ಕೆ ಕಲಿಕೆ ಬಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕೆ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಹೊಟೇಲ್ ಮಾಲೀಕ ಈತನ ಬುದ್ಧಿವಂತಿಕೆ ಕಂಡು, ಈತನಿಗೆ ವಿದ್ಯಾಭ್ಯಾಸ ಕೊಡಿಸಿ, ಪದವಿ ಪಡೆಯಲು ಸಹಾಯ ಮಾಡಿದರು.
ಬಳಿಕ ಪೊಲೀಸ್ ಡಿಪಾರ್ಟ್‌ಮೆಂಟ್ ಸೇರಿದ ಈ ಧೈರ್ಯವಂತ, ಎನ್‌ಕೌಂಟರ್ ಮೂಲಕ ಮುಂಬೈನಲ್ಲಿ ಸದ್ದು ಮಾಡಿದ್ದರು. ಎಷ್ಟೋ ರೌಡಿಶೀಟರ್‌ಗಳು, ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡಿದ ಖ್ಯಾತಿ ದಯಾನಾಯಕ್‌ಗೆ ಇದೆ. ದಯಾನಾಯಕ್ ಅನ್ನೋ ಹೆಸರು ಕೇಳಿದ್ರೆ, ಮುಂಬೈನ ರೌಡಿಗಳು ಗಡಗಡ ನಡುಗುವ ಪರಿಸ್ಥಿತಿಯನ್ನು ತಂದಿರಿಸಿದ್ದರು. ಇದೇ ದಯಾನಾಯಕ್ ಈಗ ಸೈಫ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ಆಗಿದ್ದೇನು..?
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ನುಗ್ಗಿದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು, ಸೈಫ್ ದೇಹದ 6 ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ, ಹೊಟ್ಟೆ ಭಾಗಗಳಿಗೆ ಇರಿದಿದ್ದು, ತಕ್ಷಣ ಸೈಫ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ನಟನ ಪ್ರತಿಕ್ರಿಯೆ..
ಈ ಬಗ್ಗೆ ಸೈಫ್ ಖುದ್ದು ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ. ಯಾವುದೇ ತೊಂದರೆಯಾಗಿಲ್ಲ. ಅಭಿಮಾಾನಿಗಳ ಪ್ರೀತಿಗೆ ನಾನು ಚಿರಋಣಿ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ಬಳಿಕ ಎಲ್ಲ ಸತ್ಯ ಹೊರಬೀಳಲಿದೆ ಎಂದು ಸೈಫ್ ಹೇಳಿದ್ದಾರೆ.
ಮನೆಗೆಲಸದವರ ಮೇಲೆಯೇ ಅನುಮಾಾನ
ಸೈಫ್ ಮನೆಯವರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಬಗ್ಗೆಯೇ ಅನುಮಾನವಿದೆ. ಕೆಲಸ ಮಾಡುತ್ತಿದ್ದವರ ಸಹಾಯವಿಲ್ಲದೇ, ಯಾರೂ ಇಂಥ ಕೆಲಸ ಮಾಡಲು ಸಾಧ್ಯವಿಲ್ಲ. ಯಾರೋ ಈ ದರೋಡೆಗೆ ಸಹಾಾಯ ಮಾಡಿದ್ದಾರೆ. ನಮ್ಮ ಮನೆಗೆ ಎರಡು ದೊಡ್ಡ ದೊಡ್ಡ ಗೇಟ್‌ಗಳಿಗೆ. ಎರಡೂ ಕಡೆ ಇಬ್ಬಿಬ್ಬರು ಸೆಕ್ಯುರಿಟಿಗಳಿದ್ದಾರೆ. ಅವರನ್ನು ದಾಟಿ ಅವನು ಒಳ ನುಗ್ಗಲು ಸಾಧ್ಯವಿಲ್ಲ. ಆದರೆ ದರೋಡೆ ಕೋರ ಇಷ್ಟು ಧೈರ್ಯವಾಗಿ ಒಳ ನುಗ್ಗಿದ್ದಾನೆಂದರೆ, ಇದರಲ್ಲಿ ಮನೆಯಲ್ಲಿ ಇರುವವರ ಸಹಾಯ ಪಡೆದೇ ಇರುತ್ತಾನೆ ಎಂದು ಸೈಫ್ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.
ಬಚಾವಾದ ನಟಿ ಕರೀನಾ ಕಪೂರ್
ಇನ್ನು ಸೈಫ್ ಅಲಿ ಖಾನ್ ಮಾತ್ರ ದರೋಡೆಕೋರನಿಂದ ಹಲ್ಲೆಗೊಳಗಾಗಿದ್ದು, ಕರೀನಾ ಹೇಗೆ ಬಚಾವಾದ್ರೂ ಅನ್ನೋ ಪ್ರಶ್ನೆಗೆ ಉತ್ತರ, ಅವರು ಅಂದು ರಾತ್ರಿ ಕರಿಶ್ಮಾ ಸೇರಿ ಹಲವರ ಜೊತೆ ಗರ್ಲ್ಸ್ ನೈಟ್ ಪಾರ್ಟಿಗೆ ತೆರಳಿದ್ದರು. ಹಾಗಾಗಿ ಸೈಫ್ ಒಬ್ಬರೇ ಮನೆಯಲ್ಲಿದ್ದರು. ಮನೆಯಲ್ಲಿ ಕೆಲಸದವರೂ ಇದ್ದು, ಅವರು ಕೂಡ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅವರಿಗೂ ಸಣ್ಣ ಪುಟ್ಟ ಗಾಯಗಳಾಾಗಿರುವ ಸಾಧ್ಯತೆ ಇದೆ. ಆ ಬಗ್ಗೆ ಯಾವುದೇ ವರದಿಯಾಗಿಲ್ಲ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ದರೋಡೆಕೋರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.