Bollywood News: ಕೂದಲೆಳೆ ಅಂತರದಲ್ಲಿ ಉಗ್ರರಿಂದ ಪಾರಾದ ಹಿಂದಿ ಸಿರಿಯಲ್ ಕಪಲ್

Bollywood News: ಯೂಟ್ಯೂಬರ್ ಹಿಂದಿ ಸಿರಿಯಲ್ ನಟ- ನಟಿ ಮತ್ತು ನಿಜ ಜೀವನದ ದಂಪತಿಯಾಗಿರುವ ದೀಪಿಕಾ ಕಕ್ಕರ್ ಮತ್ತು ಶೋಯೇಬ್ ಇಬ್ರಾಹಿಂ ಅವರು ಕೂದಲೆಳೆ ಅಂತರದಲ್ಲಿ ಉಗ್ರರ ಕೈಯಿಂದ ಪಾರಾಗಿ ಬಂದಿದ್ದಾರೆ.

ಬರೀ ಯೂಟ್ಯೂಬ್‌ನಿಂದಲೇ ಕೋಟಿಗಟ್ಟಲೇ ದುಡ್ಡು ಮಾಡಿರುವ ದೀಪಿಕಾ- ಶೋಯೇಬ್ ಹಿಂದಿ ಸಿರಿಯಲ್, ರಿಯಾಲಿಟಿ ಶೋನಲ್ಲಿ ಬ್ಯೂಸಿಯಾಗಿರುವ ಜೋಡಿಯಾಗಿದೆ. ಅಲ್ಲದೇ ಇವರಿಗೆ ಬಟ್ಟೆ ಬ್ಯುಸಿನೆಸ್ ಕೂಡ ಇದೆ. ದೀಪಿಕಾ ಸಸುರಾಲ್ ಸಿಮರ್‌ ಕಾ ಅನ್ನೋ ಸಿರಿಯಲ್‌ನಲ್ಲಿ ನಟಿಸುತ್ತಿದ್ದಾಗ, ಶೊಯೇಬ್ ಕೂಡ ಅದೇ ಸಿರಿಯಲ್‌ನಲ್ಲಿ ನಾಯಕನಾಗಿ ಅಂದ್ರೆ ದೀಪಿಕಾ ಪತಿಯ ಕ್ಯಾರೆಕ್ಟರ್‌ ನಿರ್ವಹಿಸುತ್ತಿದ್ದರು.

ಇವರಿಬ್ಬರಿಗೂ ಸಿರಿಯಲ್ ಸೆಟ್‌ನಲ್ಲೇ ಲವ್ ಆಗಿ, ಇಬ್ಬರೂ ಮದುವೆಯಾಗಿ, ದೀಪಿಕಾ ಮುಸ್ಲಿಂ ಮತಕ್ಕೆ ಮತಾಂತರವಾಗಿದ್ದರು. ಇದೀಗ ಅವರಿಗೆ ಓರ್ವ ಮಗನಿದ್ದಾನೆ. ಪತಿ- ಮಗನೊಂದಿಗೆ ದೀಪಿಕಾ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಆದರೆ ನಿನ್ನೆ ಮಧ್ಯಾಹ್ನದೊಳಗೇ ದೀಪಿಕಾ ಕುಟುಂಬ ಪಹಲ್ಗಮ್‌ನಿಂದ ದೆಹಲಿಗೆ ಹೊರಟಿತ್ತು. ಅವರು ದೆಹಲಿಗೆ ತಲುಪಿದ ಬಳಿಕ ಅವರಿಗೆ ಕಾಶ್ಮೀರದ ಪಹಲ್ಗಮ್‌ನಲ್ಲಿ ಉಗ್ರರು ದಾಳಿ ನಡೆಸಿದ ವಿಷಯ ಗೊತ್ತಾಗಿದೆ.

ಹೀಗಾಗಿ ದೀಪಿಕಾ ಮತ್ತು ಶೋಯೇಬ್ ತಾವು ಕಾಶ್ಮೀರದಿಂದ ವಾಪಸ್ ಆಗಿ ದೆಹಲಿಗೆ ಬಂದಿದ್ದು, ಸುರಕ್ಷಿತವಾಗಿದ್ದೇವೆ. ಈ ಬಗ್ಗೆ ಮುಂದಿನ ವ್ಲಾಗ್ ಮಾಡಲಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

About The Author