Wednesday, April 23, 2025

Latest Posts

Bollywood News: ಕಂಗನಾ ಕಂಗಾಲು! ಎಮರ್ಜೆನ್ಸಿಗೆ ಜೈ ಅಂದವರಿಗೆ ಕ್ಲಾಸ್

- Advertisement -

Bollywood News: ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರೋ ನಟಿ. ಸಿನಿಮಾರಂಗದಲ್ಲೂ ವಿವಾದದ ನಟಿ. ರಾಜಕೀಯದಲ್ಲೂ ವಿವಾದಕ್ಕೆ ಗುರಿಯಾಗಿರುವ ರಾಜಕಾರಣಿ. ಸದಾ ಒಂದಿಲ್ಲೊಂದು ಆರೋಪ ಮತ್ತು ವಿವಾದಕ್ಕೆ ಕಾರಣವಾಗುವ ಕಂಗನಾ, ತಮ್ಮ ಮೊದಲ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದವರು. ಆದರೆ, ಎಮರ್ಜೆನ್ಸಿ ಮಾತ್ರ ಮಕಾಡೆ ಮಲಗಿಬಿಟ್ಟಿತು. ಹೀಗಾಗಿ ಕಂಗನಾ ಕಂಗಾಲಾಗಿದ್ದು ಮಾತ್ರ ಸುಳ್ಳಲ್ಲ.

ಇಷ್ಟಕ್ಕೂ ಈ ಕಂಗನಾ ಬಗ್ಗೆ ಎದ್ದಿರುವ ವಿವಾದವೇನು ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ. ಕಂಗನಾ ಫಸ್ಟ್ ಟೈಮ್ ಎಮರ್ಜೆನ್ಸಿ ಸಿನಿಮಾ ನಿರ್ದೇಶನ ಮಾಡಿದ್ದು ಎಲ್ಲರಿಗೂ ಗೊತ್ತು. ಇದು ಇಂದಿರಾಗಾಂಧಿ ಆಳ್ವಿಕೆಯಲ್ಲಿ ಹೇರಿದ್ದ ಎಮರ್ಜೆನ್ಸಿ ಸಂದರ್ಭದಲ್ಲಾದ ಘಟನೆಗಳ ಸುತ್ತ ಹೆಣೆದ ಕಥಾಹಂದರದ ಚಿತ್ರ. ಈ ಸಿನಿಮಾವನ್ನು ಕಂಗನಾ ಅನೌನ್ಸ್ ಮಾಡಿದಾಗ ಆರಂಭದಲ್ಲೇ ಒಂದಷ್ಟು ಪರ-ವಿರೋಧದ ಮಾತುಗಳು ಕೇಳಿಬಂದವು. ಬಳಿಕ ಎಮರ್ಜೆನ್ಸಿ ಶುರು ಮಾಡಿ, ಅದನ್ನು ರಿಲೀಸ್ ಮಾಡೋಕೆ ಕಂಗನಾ ಹರಸಾಹಸವೇ ಪಡಬೇಕಾಯಿತು. ಹೇಗೋ ರಿಲೀಸ್ ಕೂಡ ಆಯ್ತು. ಆದರೆ, ಕಂಗನಾ ಅಂದುಕೊಂಡಂತೆ ಅವರ ಎಮರ್ಜೆನ್ಸಿ ಸುದ್ದಿಯಾಗಲಿಲ್ಲ. ಸದ್ದೂ ಮಾಡಲಿಲ್ಲ. ತೆರೆಗೆ ಬಂದ ಸಿನಿಮಾ ನೊಡಿದ ಹಲವರು ಕೊಂಡಾಡಿದರು. ಕೆಲವರು ಮೂಗುಮುರಿದರು. ಬಾಕ್ಸಾಫೀಸಲ್ಲಿ ಸೋಲುಂಡರೂ, ಸದ್ಯ ಎಮರ್ಜೆನ್ಸಿ ಓಟಿಟಿಯಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಇದನ್ನು ಕಂಡ ಕಂಗನಾ, ಸಿನಿಮಾ ಬಗ್ಗೆ ಯಾವುದೇ ಪೂರ್ವಾಗ್ರಹ ಇಲ್ಲದೆ ನೋಡಬೇಕು ಅಂತ ಮನವಿ ಮಾಡಿದ್ರು. ಸಿನಿಮಾ ಕುರಿತು ಸಂಜಯ್ ಗುಪ್ತಾ ಸೂಚಿಸಿರುವ ಮೆಚ್ಚುಗೆ ಕುರಿತಂತೆ ಉದ್ಯಮದೊಳಗೆ ಇರುವಂತಹ ಪಕ್ಷಪಾತದ ಬಗ್ಗೆಯೂ ಕಂಗನಾ ಮಾತನಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಎಮರ್ಜೆನ್ಸಿ ಸೋತಿರೋದು ನಿಜ. ಆ ಸಿನಿಮಾ ಕುರಿತು ಬೆರಳೆಣಿಕೆ ಮಂದಿ ಒಳ್ಳೆಯ ಮಾತುಗಳನ್ನಾಡಿದ್ದು ಬಿಟ್ಟರೆ, ಅಷ್ಟಾಗಿ ಒಳ್ಳೆಯ ಮಾತುಗಳು ಕೇಳಿಬರಲಿಲ್ಲ. ಅನೇಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅವರ ಚಿತ್ರವನ್ನು ಹಾಡಿ, ಹೊಗಳಿ ಕಂಗನಾ ಅವರ ನಿರ್ದೇಶನದ ಕೆಲಸದ ಬಗ್ಗೆ ಟ್ವಿಟ್ ಕೂಡ ಮಾಡುತ್ತಿದ್ದಾರೆ. ಆ ಕುರಿತು ಸ್ವತಃ ಕಂಗನಾ, ಪೂರ್ವ ನಿರ್ಧಾರಿತವಾಗಿ ತಮ್ಮ ಚಿತ್ರವನ್ನು ನೋಡದೆ ಇರಬೇಡಿ ಅಂದಿದ್ದಾರೆ.

ಕಂಗನಾ ಅವರ ನಟನೆ ಬಗ್ಗೆ ಯಾರಿಗೂ ತಕರಾರಿಲ್ಲ. ಸಿನಿಮಾ ವಿಷಯಕ್ಕೆ ಬಂದರೆ, ಅವರನ್ನು ಮೆಚ್ಚಿಕೊಂಡವರೇ ಹೆಚ್ಚು. ಆದರೆ, ಅವರ ರಾಜಕೀಯ ವಿಷಯ ಮಾತ್ರ ಒಂದಷ್ಟು ಮಂದಿಗೆ ಆಗಿಬರುತ್ತಿಲ್ಲ. ಕಾರಣ, ಅವರ ಚಿಂತನೆ-ಸಿದ್ಧಾಂತಗಳು ಬೇರೆ ಬೇರೆ. ಕಂಗನಾ ಮೊದಲಿನಿಂದಲೂ ಬಿಜೆಪಿ ಹಾಗೂ ಆ ಪಕ್ಷದ ಆಲೋಚನೆಗಳಿಗೆ ಬದ್ಧರಾದವರು. ಹಿಂದೂ ಚಿಂತನೆಗಳ ಬಗ್ಗೆ ಮಾತಾಡುತ್ತಲೇ ಒಂದಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾದವರು. ಹಾಗಾಗಿಯೇ ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡುತ್ತಾರೆ ಅಂತ ಅನೌನ್ಸ್ ಮಾಡಿದಾಗ ಬಹಳಷ್ಟು ಮಂದಿ ಪ್ರೊಪೊಗಾಂಡ ಸಿನಿಮಾ ಅಂತಾನೇ ಭಾವಿಸಿದ್ರು. ಆದರೆ, ಅದು ಆ ರೀತಿ ಇಲ್ಲ ಎಂದು ಅನೇಕರಿಗೆ ಆ ಬಳಿಕ ಅನಿಸಿದ್ದು. ಈ ರೀತಿ ಪೂರ್ವ ನಿರ್ಧಾರಿತ ಆಗಬೇಡಿ ಎಂದು ಕಂಗನಾ ಕೂಡ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಿರ್ದೇಶಕ ಸಂಜಯ್ ಗುಪ್ತಾ ಅವರು ‘ಎಮರ್ಜೆನ್ಸಿ’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಈ ಬಗ್ಗೆ ಮಾತನಾಡಿರುವ ಕಂಗನಾ, ‘ಸಂಜಯ್ ಗುಪ್ತಾ ಅವರು ತಮಗೆ ಪೂರ್ವಾಗ್ರಹ ಪೀಡಿತ ಭಾವನೆಗಳು ಇವೆ ಎಂದು ಒಪ್ಪಿಕೊಂಡಿದ್ದಾರೆ. ನೀವು ವಿಫಲರಾಗುತ್ತಿರುವಾಗ ನನ್ನನ್ನು ಅರ್ಥಮಾಡಿಕೊಳ್ಳಲು ಏಕೆ ಪ್ರಯತ್ನಿಸುತ್ತಿದ್ದೀರಿ? ಅಚ್ಚರಿಯ ಸಂಗತಿ ಎಂದರೆ ಅವರು ತಾವು ವಿಫಲವಾಗಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ ಕಂಗನಾ.

‘ನನ್ನ ಬಗ್ಗೆ ನೆಗೆಟಿವ್ ಚಿಂತನೆಗಳನ್ನು ಇಟ್ಟುಕೊಂಡಿದ್ದಾರೆ. ನೆಗೆಟಿವ್ ಆಗಿಯೇ ಯೋಚನೆ ಮಾಡುತ್ತಿದ್ದಾರೆ. ನಾನು ಸೋಲನ್ನು ಕಾಣಲಿ ಅಂತಾನೆ ಬಯಸುವಾಗ ನಾನು ಏನು ಮಾಡುತ್ತಿದ್ದೇನೆ ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ? ನನ್ನನ್ನು ಅರ್ಥಮಾಡಿಕೊಳ್ಳಲು ನಿಮಗೆ ಬುದ್ಧಿ ಶಕ್ತಿ ಇದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನೀವು ಒಬ್ಬ ವ್ಯಕ್ತಿ ಬಗ್ಗೆ ತಿಳಿಯಲು ಇಚ್ಛಿಸುತ್ತೀರಿ ಅಂದರೆ, ಅವರ ಕುರಿತು ನಿಮಗೆ ವಿಸ್ತೃತ ದೃಷ್ಟಿಕೋನ ಇರಬೇಕು. ನೀವು ಯಾವ ರೀತಿಯ ಸಿನಿಮಾ ಮಾಡುತ್ತೀರಿ. ಅನ್ನೋದು ಎಲ್ಲರಿಗೂ ಗೊತ್ತಿದೆ ಅಂತ ಹೇಳಿದ್ದಾರೆ.

‘ಸಿನಿಮಾ ಉದ್ಯಮ ದ್ವೇಷ ಮತ್ತು ಪೂರ್ವಾಗ್ರಹಗಳಿಂದ ಹೊರಬಂದು ಉತ್ತಮ ಕೆಲಸವನ್ನು ಒಪ್ಪಿಕೊಳ್ಳಬೇಕು. ಸಂಜಯ್ ಅವರೇ ಆ ತಡೆಗೋಡೆಯನ್ನು ಮುರಿದಿದ್ದಕ್ಕಾಗಿ ಧನ್ಯವಾದ. ಎಲ್ಲಾ ಸಿನಿಮಾ ಬುದ್ಧಿ ಜೀವಿಗಳಿಗೆ ಒಂದು ಮೆಸೇಜ್ ಕೊಡ್ತೀನಿ. ನನ್ನ ಬಗ್ಗೆ ಯಾವುದೇ ಕಲ್ಪನೆಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ನಾನು ನಿಮ್ಮ ವ್ಯಾಪ್ತಿಯಿಂದ ಹೊರಗಿದ್ದೇನೆ ಅಂತ ಕಂಗನಾ ಮಾತಾಡಿದ್ದಾರೆ.

ಅದೇನೆ ಇರಲಿ, ಕಂಗನಾ, ಒಬ್ಬ ನಟಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ, ರಾಜಕಾರಣಿಯಾಗಿ ಕೆಲವು ಚಿಂತನೆಗಳ ಮೂಲಕ ಮಾತನಾಡುವ ಮಾತುಗಳಿಂದ ಅವರು ಒಂದಷ್ಟು ಮಂದಿಗೆ ಬೇಸರವಾಗಿದ್ದಾರೆ. ಒಬ್ಬ ನಟಿಯಾಗಿ ಇಷ್ಟವಾಗುವ ಅವರ ಚಿಂತನೆಗಳು ಹೇಗೆಲ್ಲಾ ಇರಬೇಕು ಅನ್ನೋದನ್ನು ಕಲಿತುಕೊಂಡರೆ ಅವರು ಕಲಾ ಮಾಧ್ಯಮದಲ್ಲಿ ಇನ್ನಷ್ಟು ಬೆಳೆಯಲು ಸಾಧ್ಯವಾಗಬಹುದು ಅಂತಾನೂ ಒಂದಷ್ಟು ಮಂದಿ ಟ್ವೀಟ್ ಮೂಲಕ ಬರಹದ ಪೆಟ್ಟು ಕೊಟ್ಟಿದ್ದಾರೆ.
ಒಂದಂತೂ ನಿಜ, ಕಂಗನಾ, ಯಾರ ಮಾತಿಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ವಿವಾದಕ್ಕೆ ಗುರಿಯಾಗುತ್ತಾರೆ. ಸಿನಿಮಾ ಅವರಿಗೆ ಒಂದು ವೇದಿಕೆ ಅಷ್ಟೇ. ಅಲ್ಲಿ ಅವರನ್ನು ಪ್ರೀತಿಸುವ ಇಷ್ಟಪಡುವ ಮಂದಿ ಸಾಕಷ್ಟಿದ್ದಾರೆ. ಆದರೆ, ರಾಜಕಾರಣ ಅಂತ ಬಂದಾಗ, ಕಂಗನಾ ಅವರ ಮಾತುಗಳಿಗೆ, ವಿರೋಧ ಹೆಚ್ಚಾಗುತ್ತೆ. ಅಂಥದ್ದೊಂದು ವಿವಾದದ ನಟಿ ಅಂದರೆ ಬಹುಶಃ ಕಂಗನಾ ಇರಬೇಕು ಅನ್ನುವ ಮಾತು ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

- Advertisement -

Latest Posts

Don't Miss