Thursday, April 3, 2025

Latest Posts

Bollywood News: ಶ್ರೀಲೀಲಾ ಬಾಲಿವುಡ್ ನಿಂದ ಹೊರಗೆ ಕನ್ನಡತಿಗೆ ಕೈ ಬಿಟ್ಟಿದ್ದು ಏಕೆ?

- Advertisement -

Bollywood News: ಸದ್ಯ ಬಾಲಿವುಡ್ ಅಂಗಳದಲ್ಲಿ ಕನ್ನಡ ನಟಿಮಣಿಯರದ್ದೇ ಕಾರುಬಾರು. ಈ ಮಾತು ಅಕ್ಷರಶಃ ನಿಜ. ಹಾಗೆ ನೋಡಿದರೆ, ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ನಾಯಕಿ. ಆ ಸಿನಿಮಾ ರಂಜಾನ್ ಹಬ್ಬಕ್ಕೆ ರಿಲೀಸ್ ಅಗಿದೆ. ರಶ್ಮಿಕಾ ಬಾಲಿವುಡ್ ಗೆ ಹಾರಿದ ಬೆನ್ನಲ್ಲೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲ ಕೂಡ ಬಾಲಿವುಡ್ ಗೆ ಧುಮುಕಿದ್ದು ಗೊತ್ತೇ ಇದೆ. ಇನ್ನು, ಕನ್ನಡದ ಅನೇಕ ನಟಿಮಣಿಗಳು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ದೀಪಿಕಾ ಪಡುಕೋಣೆ, ಶಿಲ್ಪಾಶೆಟ್ಟಿ, ಸುನೀಲ್ ಶೆಟ್ಟಿ ಹೀಗೆ ಕನ್ನಡ ನೆಲದ ಅನೇಕರು ಅಲ್ಲಿ ಸುದ್ದಿಯಾಗಿರೋದು ಗೊತ್ತೇ ಇದೆ. ಈಗ ವಿಷಯ ಏನಪ್ಪಾ ಅಂದ್ರೆ, ಕನ್ನಡದ ನಟಿ ಶ್ರೀಲೀಲ ಇತ್ತೀಚೆಗಷ್ಟೇ ಬಾಲಿವುಡ್ ಅಂಗಳ ಸ್ಪರ್ಶಿಸಿದ್ದರು. ಈಗ ಹರಿದಾಡುತ್ತಿರುವ ಸುದ್ದಿಯೊಂದರ ಪ್ರಕಾರ ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾದಿಂದ ಶ್ರೀಲೀಲ ಅವರನ್ನು ಕೈ ಬಿಡಲಾಗಿದೆಯಂತೆ!

ಶ್ರೀಲೀಲ ಸದ್ಯ ಈಗ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ಇತ್ತೀಚೆಗಷ್ಟೆ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದ ಶ್ರೀಲೀಲಗೆ ಭರಪೂರ ಅವಕಾಶಗಳು ಬರುತ್ತಿದ್ದದ್ದು ಎಲ್ಲರಿಗೂ ಗೊತ್ತು. ಆದರೆ ಇದೀಗ ಶ್ರೀಲೀಲಾ ಅವರನ್ನು ಸಿನಿಮಾ ಒಂದರಿಂದ ತೆಗೆದು ಹಾಕಲಾಗಿದೆ ಎಂಬ ಸುದ್ಯೊಂದು ಹರಿದಾಡುತ್ತಿದೆ. ಬಾಲಿವುಡ್ ಸಿನಿಮಾಗಾಗಿಯೇ ತೆಲುಗು ಚಿತ್ರರಂಗದಿಂದ ಬಂದ ಅವಕಾಶಗಳನ್ನೆಲ್ಲಾ ಬೇಡ ಅಂದ ಈ ನಟಿಗೆ ಈಗ ಬಾಲಿವುಡ್ ಸಿನಿಮಾ ಆಫರ್ ಸಹ ಕೈತಪ್ಪಿ ಹೋಗಿದೆ. ಸದ್ಯ ಈ ಸುದ್ದಿ ಶ್ರೀಲೀಲಾ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಹಾಗೆ ನೋಡಿದರೆ, ಬಾಲಿವುಡ್ ಅಂಗಳಕ್ಕೆ ಶ್ರೀಲೀಲ ಕಾಲಿಡುತ್ತಿದ್ದಂತೆಯೇ ಅವರಿಗೆ ಮೂರು ಬಿಗ್ ಬಜೆಟ್ ನ ಹೊಸ ಸಿನಿಮಾಗಳ ಆಫರ್ ಬಂದಿತ್ತು. ದೊಡ್ಡ ನಿರ್ಮಾಣ ಸಂಸ್ಥೆಗಳು ಆ ಮೂರು ಸಿನಿಮಾಗಳನ್ನು ನಿರ್ಮಿಸುತ್ತಿದ್ದವು. ಅವುಗಳಲ್ಲಿ ಎರಡು ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ಹೀರೋ ಆಗಿದ್ದರು. ಅನುರಾಗ್ ಬಸು ನಿರ್ದೇಶನದ ‘ಆಶಿಖಿ 3’ ಮತ್ತು ‘ಪತಿ-ಪತ್ನಿ ಔರ್ ಓ’ ಸರಣಿಯ ಹೊಸ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದರು. ಆ ಎರಡೂ ಸಿನಿಮಾಗಳಿಗೆ ಕಾರ್ತಿಕ್ ಆರ್ಯನ್ ಅವರೇ ಹೀರೋ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಶ್ರೀಲೀಲಾ ಅವರನ್ನು ‘ಪತಿ-ಪತ್ನಿ ಔರ್ ಓ’ ಸಿನಿಮಾದಿಂದ ಕೈಬಿಡಲಾಗಿದೆಯಂತೆ.

ಶ್ರೀಲೀಲಾ ಅವರ ಬದಲಿಗೆ ‘ಪತಿ-ಪತ್ನಿ ಔರ್ ಓ’ ಸಿನಿಮಾಗೆ ರಾಶಾ ತಂಡಾನಿ ಅವರನ್ನು ಆಯ್ಕೆ ಮಾಡಲಾಗಿದೆಯಂತೆ ಈ ಸುದ್ದಿ ಸದ್ಯ ಬಾಲಿವುಡ್ ಗಲ್ಲಿಗಳಲ್ಲಿ ಸುಳಿದಾಡುತ್ತಿದೆ. ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಈಗಾಗಲೇ ‘ಆಶಿಖಿ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದು, ‘ಪತಿ ಪತ್ನಿ ಔರ್ ಓ’ ಸಿನಿಮಾಗೆ ಕಾರ್ತಿಕ್ ಎದುರು ಹೊಸ ನಟಿಯನ್ನು ಹಾಕಿಕೊಳ್ಳುವ ಯೋಜನೆ ನಿರ್ಮಾಪಕರದ್ದಂತೆ. ಈ ಜೋಡಿಯನ್ನು ರಿಪೀಟ್ ಮಾಡುವುದು ಬೇಡ ಎಂಬ ಕಾರಣಕ್ಕೆ ಶ್ರೀಲೀಲಾರನ್ನು ಆ ಸಿನಿಮಾದಿಂದ ಹೊರಗಿಡಲಾಗಿದೆ ಎಂಬ ಸುದ್ದಿ ಇದೆ.

ಇನ್ನು, ಇದರ ಜೊತೆಗೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಂ ಅಲಿ ಖಾನ್ ನಟನೆಯ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುವ ಅವಕಾಶ ಪಡೆದಿದ್ದರು. ಆದರೆ, ಈ ಸಿನಿಮಾದ ಯಾವುದೇ ಅಪ್​ಡೇಟ್ ಹೊರ ಬಿದ್ದಿಲ್ಲ. ಇಬ್ರಾಹಿಂ ಖಾನ್ ಅವರ ಮೊದಲ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೇ ಈ ಸಿನಿಮಾ ನಿಂತೇ ಹೋಯ್ತು ಎಂಬ ಸುದ್ದಿಗಳು ಕೂಡ ಓಡಾಡುತ್ತಿವೆ. ಆದರೆ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿರುವ ‘ಆಶಿಖಿ 3’ ಸಿನಿಮಾದ ಚಿತ್ರೀಕರಣ ಸದ್ಯ ಚಾಲ್ತಿಯಲ್ಲಿದೆ. ನಿರ್ದೇಶಕ ಅನುರಾಗ್ ಬಸು ನಿರ್ದೇಶನದ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆಗಳು ಜಾಸ್ತಿ ಇದೆ.

ಇದರ ಹೊರತಾಗಿ ಶ್ರೀಲೀಲಾ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಪರಾಶಕ್ತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವಿತೇಜ ಜೊತೆಗೆ ‘ಮಾಸ್ ಜಾತರ’ ಎಂಬ ಇನ್ನೊಂದು ಸಿನಿಮಾದಲ್ಲಿ ಈಗಾಗಲೇ ನಟಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ವಿಜಯ್ ದೇವರಕೊಂಡ ಜೊತೆಗೆ ‘ಕಿಂಗ್​ಡಮ್’ ಸಿನಿಮಾದಲ್ಲೂ ಶ್ರೀಲೀಲಾ ನಟಿಸಬೇಕಿತ್ತು. ಆದರೆ ಆ ಚಿತ್ರದಿಂದಲೂ ಶ್ರೀಲೀಲಾ ಅವರನ್ನು ಕೈಬಿಡಲಾಗಿದೆ.

ಈ ಸಿನಿಮಾ ಅಂದ್ರೇನೆ ಹೀಗೆ. ಎಲ್ಲವೂ ಅಂದುಕೊಂಡಂತೆ ನಡೆಯೋದು ಕಷ್ಟ. ಎಷ್ಟೋ ಸಲ, ಶೂಟಿಂಗ್ ನಡೆದು, ಕೆಲವೊಮ್ಮೆ ನಟಿಮಣಿಗಳು ಚೇಂಜ್ ಆಗಿರುವ ಉದಾಹರಣೆ ಇದೆ. ಸದ್ಯ ಬಾಲಿವುಡ್ ಅಂಗಳಕ್ಕೆ ನೂರಾರು ಕನಸು ಕಟ್ಟಿಕೊಂಡು ಜಿಗಿದಿದ್ದ ಶ್ರೀಲೀಲಾಗೆ ಸದ್ಯ ಶಾಕ್ ಆಗಿದೆ. ಪತಿ ಪತ್ನಿ ಔರ್ ಓ ಸಿನಿಮಾದಲ್ಲಿ ನಟಿಸೋ ಅವಕಾಶ ಮಿಸ್ ಮಾಡಿಕೊಂಡಿರುವ ಶ್ರೀಲೀಲಗೆ ಮುಂದೆ ಹೀಗೆ ಆಗದಿರಲಿ ಅನ್ನುವ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಅಂದಮೇಲೆ ಈ ರೀತಿಯ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಆದರೆ, ಕೈಯಲ್ಲಿದ್ದ ಅವಕಾಶಗಳನ್ನು ತಳ್ಳಿ, ಬಾಲಿವುಡ್ ಗೆ ಹಾರಿದ ಶ್ರೀಲೀಲಗೆ ಹೀಗೆ ಆಗಬಾರದಿತ್ತು ಅನ್ನುವ ಮಾತುಗಳು ಸದ್ಯ ಓಡಾಡುತ್ತಿವೆ.

- Advertisement -

Latest Posts

Don't Miss