Thursday, December 4, 2025

Latest Posts

ನಿಮ್ಮ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ ನಿಮ್ಮ(ಪುರುಷರ) ಬಿಹೇವಿಯರ್ ಹೇಗಿರಬೇಕು..?

- Advertisement -

ಹೆಚ್ಚಿನ ಪುರುಷರಿಗೆ ತಮ್ಮ ಮನೆಯ ಹೆಣ್ಣುಮಕ್ಕಳು ಮುಟ್ಟಾದಾಗ ಹೇಗೆ ವರ್ತಿಸಬೇಕು, ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಅತೀಯಾದ ಕಾಳಜಿ ತೋರಲು ಹೋಗಿ ಎಡವಟ್ಟು ಮಾಡಿಕೊಳ್ಳುವವರು ಕೆಲವರಾದರೆ, ಏನು ಮಾಡಬೇಕೆಂದು ತಿಳಿಯದೇ ನಿರ್ಲಕ್ಷ್ಯ ತೋರುವವರು ಹಲವರು.
ಆದ್ರೆ ಹೆಣ್ಣು ಮುಟ್ಟಾದ ಸಮಯದಲ್ಲಿ ಅತೀ ಕಾಳಜಿ ಮತ್ತು ನಿರ್ಲಕ್ಷ್ಯ ತೋರದೆ ಸಮವಾಗಿ ನಿಭಾಯಿಸುವುದು ತುಂಬಾನೇ ಸುಲಭ. ಆ ಬಗ್ಗೆ ನಾವಿವತ್ತು ಚಿಕ್ಕ ವಿವರ ನೀಡಲಿದ್ದೇವೆ.

Karnataka TV Contact

1..ಅತೀ ಕಾಳಜಿ ಮಾಡಬೇಡಿ, ಆದ್ರೆ ಸಹಜ ಆರೈಕೆ ಖಂಡಿತ ಮಾಡಿ
ಕೆಲ ಹೆಣ್ಣು ಮಕ್ಕಳು ಮುಟ್ಟಾದಾಗ ಹೊಟ್ಟೆ ನೋವು, ಮೈ- ಕೈ ನೋವಿನಿಂದ ಬಳಲುತ್ತಾರೆ. ಕೆಲವರು ಹಿಂಸೆ ಪಟ್ಟು ನೋವು ತೋರಿಸಿಕೊಳ್ಳುತ್ತಾರೆ. ಆದ್ರೆ ಕೆಲ ಹೆಣ್ಣು ಮಕ್ಕಳು ಮುಟ್ಟಾದಾಗ ನಾರ್ಮಲ್ ಆಗಿದ್ದರೂ, ಆಕೆಗೆ ವಿಶ್ರಾಂತಿಯ ಅಗತ್ಯ ಇರುತ್ತದೆ. ಹೀಗಾಗಿ ಆಕೆಯಿಂದ ಹೆಚ್ಚಿನ ಕೆಲಸ ಮಾಡಿಸಬೇಡಿ. ದೇಹಕ್ಕೆ ಅಗತ್ಯವಿರುವ ಆಹಾರ, ಹಣ್ಣು ಹಂಪಲು ನೀಡಿ. ಆದ್ರೆ ಅತೀ ಕಾಳಜಿ ಮಾಡಬೇಡಿ. ಆಕೆಗೆ ಅದು ಹಿಂಸೆ ಎನ್ನಿಸಿದರೂ ಎನ್ನಿಸಬಹುದು.

2.. ಆಕೆಯೊಂದಿಗೆ ಸಮಯ ಕಳೆಯಿರಿ, ಆಕೆಗೆ ಇಷ್ಟವಾಗುವ ತಿನಿಸು ಕೊಡಿಸಿ.
ಆಕೆ ಮುಟ್ಟಿನ ನೋವು ಮರೆಯಲು ಆಕೆಯೊಂದಿಗೆ ಸಮಯ ಕಳೆಯಿರಿ. ಮನೆಯಲ್ಲೇ ಆಕೆಗೆ ಇಷ್ಟವಾಗುವ ಸಿನಿಮಾ ತೋರಿಸಿ. ಆಕೆ ವಿಶ್ರಮ ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ ಅವಕಾಶ ಮಾಡಿಕೊಡಿ. ಅಲ್ಲದೇ, ಕೆಲ ಹೆಣ್ಣುಮಕ್ಕಳಿಗೆ ಮುಟ್ಟಾದಾಗ ರುಚಿ ರುಚಿ ತಿಂಡಿ ತಿನ್ನುವ ಆಸೆಯಿರುತ್ತದೆ. ಹೀಗಾಗಿ ಆಕೆಗೆ ಇಷ್ಟವಾಗುವ ತಿನಿಸು ಕೊಡಿಸಿ.

3.. ಮುಟ್ಟಿನ ಸಮಯದಲ್ಲಿ ಸಿಟ್ಟು ಮಾಡಬೇಡಿ, ನಿರ್ಲಕ್ಷ್ಯ ತೋರಬೇಡಿ.
ಎಲ್ಲಕ್ಕಿಂತ ಮುಖ್ಯವಾಗಿ ಹೆಣ್ಣು ಮಕ್ಕಳು ಮುಟ್ಟಾದಾಗ ರೇಗಾಡುವುದು, ಹಿಂಸೆಪಟ್ಟರೂ ಆಕೆಯ ಬಗ್ಗೆ ನಿರ್ಲಕ್ಷ್ಯ ತೋರುವುದು ಮಾಡಬೇಡಿ. ಇದರಿಂದ ಆಕೆ ಖಿನ್ನತೆಗೊಳಗಾಗಬಹುದು. ಮುಟ್ಟಾದಾಗ ಅಥವಾ ಮುಟ್ಟಿನ ದಿನ ಹತ್ತಿರ ಬಂದಾಗ ಕೆಲ ಹೆಣ್ಣುಮಕ್ಕಳಿಗೆ ಪ್ರತಿ ವಿಷಯಕ್ಕೂ ಸಿಟ್ಟು ಬರುತ್ತದೆ. ಅದು ಹಾರ್ಮೋನಿನಲ್ಲಾಗುವ ವ್ಯತ್ಯಾಸವೆನ್ನಲಾಗಿದೆ. ಆಕೆ ಸಿಟ್ಟು ಮಾಡಿದಳೆಂದು, ನೀವೂ ಸಿಟ್ಟಾಗಬೇಡಿ. ಆಕೆಯ ನೋವನ್ನು ಅರ್ಥ ಮಾಡಿಕೊಂಡು ಗೆಳೆಯನ ರೀತಿ ವರ್ತಿಸಿ. ತಾಳ್ಮೆಯಿಂದಿರಿ.

Shravani Somayaji

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss