Sunday, December 22, 2024

Latest Posts

BSYಗೆ ಅಧಿಕಾರ ಸಿಗ್ತು, ಆದ್ರೆ, ಲಕ್ಕಿ ಮನೆ ಇನ್ನು ಸಿಕ್ಕಿಲ್ಲ ಯಾಕೆ..?

- Advertisement -

ಬೆಂಗಳೂರು : ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಯಡಿಯೂರಪ್ಪ ಮೂರು ದಿನ ಸಿಎಂ ಆಗಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ರು.. ನಂತರ ಕುಮಾರಸ್ವಾಮಿ ಸಿಎಂ ಆದ್ರು. ಆಗ ವಿಪಕ್ಷ ನಾಯಕರಾದ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸರ್ಕಾರ ಅಸಡ್ಡೆ ತೋರಿತ್ತು.. ಯಡಿಯೂರಪ್ಪ ಸಾಮಾನ್ಯ ಬೇಡಿಕೆಯನ್ನ ನಿರಾಕರಿಸಿ ಅವಮಾನ ಮಾಡಿದ್ರು..

ಲಕ್ಕಿ ಮನೆ ಕೇಳಿದ್ದ ಯಡಿಯೂರಪ್ಪ.. ನಿರಾಕರಿಸಿದ್ದ ಕುಮಾರಸ್ವಾಮಿ..!

ಇನ್ನು ಧರ್ಮಸಿಂಗ್ ಸರ್ಕಾರದ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ರೇಸ್ ಕೋರ್ಸ್ ರಸ್ತೆಯ ಸರ್ಕಾರ ಬಂಗಲೆಯಲ್ಲಿದ್ರು.. ಆ ಮನೆಯಲ್ಲಿ ವಾಸ ಮಾಡುತ್ತಿರುವಾಗಲೇ ಬಿ.ಎಸ್ ವೈ ಅಧಿಕಾರಕ್ಕೇರುವ ಅವಕಾಶ ದೊರಕಿತ್ತು.. ಹೀಗಾಗಿ ಅದು ಲಕ್ಕಿ ಮನೆ ಎಂದು ತಿಳಿದಿದ್ದ ಯಡಿಯೂರಪ್ಪ ಕುಮಾರಸ್ವಾಮಿ ಸಿಎಂ ಆದಾಗ ವಿಪಕ್ಷ ನಾಯಕನಾದ ನನಗೆ ಈ ಬಾರಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ರು.. ಆದ್ರೆ ಕುಮಾರಸ್ವಾಮಿ ಮನೆ ವಿಚಾರದಲ್ಲೂ ರಾಜಕಾರಣ ಮಾಡಿ ಬಂಗಲೆಯನ್ನ ಯಡಿಯೂರಪ್ಪಗೆ ನೀಡದೆ ಆಪ್ತ ಸಚಿವ ಸಾರಾ ಮಹೇಶ್ ಗೆ ನೀಡಿದ್ರು.. ಬದಲಿಯಾಗ ಬೇರೆ ನಿವಾಸ ನೀಡಿದ್ರು ಯಡಿಯೂರಪ್ಪ ಆ ನಿವಾಸ ನಿರಾಕರಿಸಿ ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲೇ ವಾಸ ಮಾಡ್ತಿದ್ರು..

ಯಡಿಯೂಪ್ಪ ಸಿಎಂ ಆದರೂ ಮಾಜಿ ಮಿನಿಸ್ಟರ್ ಕಿರಿಕ್ ಕಂಟಿನ್ಯೂ..!

 ಇದೀಗ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ.. ಕುಮಾರಸ್ವಾಮಿ ಕ್ಯಾಂಪ್ ಹಾಗೂ ಕಾಂಗ್ರೆಸ್ ನಾಯಕರು ಅಧಿಕಾರ ಕಳೆದುಕೊಂಡು ಮನೆ ಸೇರಿದ್ದಾರೆ. ಆದ್ರೆ ಸರ್ಕಾರಿ ಮನೆಗಳನ್ನ ಮಾತ್ರ ಇನ್ನೂ ಖಾಲಿ ಮಾಡದೆ ಕಾಲ ದೂಡ್ತಿದ್ದಾರೆ.. ಸಿಎಂ ಆಗ್ತಿದ್ದಂತೆ ಅದೇ ನಿವಾಸಕ್ಕೆ ಶಿಫ್ಟ್ ಆಗಲು ಕಾಯ್ತಿದ್ದ ಯಡಿಯೂರಪ್ಪಗೆ ಮಾಜಿ ಸಿಎಂ ಕುಮಾರಸ್ವಾಮಿ ಆಪ್ತ ಮಾಜಿ ಸಚಿವ  ಸಾರಾ ಮಹೇಶ್ ಅಡ್ಡಗಾಲಾಗ್ತಿದ್ದಾರಂತೆ.. ಅಧಿಕಾರ ಹೋದ್ರು ಮನೆ ಬಿಡದೆ ಕೂತಿದ್ದಾರೆ.. ಸಿಎಂ ಯಡಿಯೂರಪ್ಪ ಆ ಮನೆಗೆ ಶಿಫ್ಟ್ ಆಗ್ತಾರೆ ಅಂತ ಗೊತ್ತಾದ ಕೂಡಲೇ ಅಧಿಕಾರಗಳು ಬಣ್ಣಸುಣ್ಣ ಮಾಡಲು ಹೋದವರನ್ನೂ ಸಾರಾ ಮಹೇಶ್ ವಾಪಸ್ ಕಳುಹಿಸಿದ್ದಾರಂತೆ.. ಈ ಹಿಂದೆ ಅಧಿಕಾರ ಇಲ್ಲದ ಕಾರಣ ಲಕ್ಕಿ ಮನೆ ಸಿಗದೆ ಯಡಿಯೂರಪ್ಪ ಬೇಸರಗೊಂಡಿದ್ರು. ಇದೀಗ ಸಾರಾ ಮಹೇಶ್ ಹಠದಿಂದ ಯಡಿಯೂರಪ್ಪಗೆ ಮತ್ತೆ ನಿರಾಸೆಯಾಗಿದೆ.. ಆದ್ರೆ, ಅಧಿಕಾರ ಕಳೆದುಕೊಂಡ ಇಂತಿಷ್ಟು ತಿಂಗಳಲ್ಲಿ ಮಾಜಿಗಳು ಮನೆ ಖಾಲಿ ಮಾಡಬೇಕು. ಆದ್ರೆ, ಸಾರಾ ಯಾವಾಗ ಮನೆ ಖಾಲಿ ಮಾಡ್ತಾರೆ..? ಯಡಿಯೂರಪ್ಪ ಲಕ್ಕಿ ಮನೆಗೆ ಯಾವಾಗ ಎಂಟ್ರಿಯಾಗ್ತಾರೆ  ಅನ್ನೋದನ್ನ ಕಾದು ನೋಡಬೇಕಿದೆ..

- Advertisement -

Latest Posts

Don't Miss