‘ಮೈತ್ರಿ ಪತನಗೊಂಡ್ರೆ ಬಿಜೆಪಿ ಸರ್ಕಾರ ರಚಿಸೋದು ಖಚಿತ’- ಬಿಎಸ್ವೈ

ಬೆಂಗಳೂರು: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಂಡರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಅಂತ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ,ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ, ರಾಜ್ಯಪಾಲರ ಭೇಟಿ ಮಾಡುವ ಕುರಿತ ಮಾಧ್ಯಮಗಳಿಂದ ತಿಳಿದುಬಂದಿದೆ. ಇನ್ನೂ ಹತ್ತು ಹನ್ನೆರಡು ಶಾಸಕರ ರಾಜೀನಾಮೆ ನೀಡಿವ ಸಾಧ್ಯತೆ ಇದೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ. ಆದರೆ ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಅಂತ ಹೇಳಿದ್ರು. ಈ ಸರ್ಕಾರ ಬೀಳಿಸುವ ಬಗ್ಗೆ, ಶಾಸಕರ ಸೆಳೆಯುವ ಮಾತನಾಡಿಲ್ಲ. ಅವರೇ ರಾಜಿನಾಮೆ ಕೊಟ್ಟರೆ ನೋಡೋಣ ಎಂದಿದ್ದೆ ಈಗಲೂ ಅದನ್ನೇ ಹೇಳುತ್ತೇನೆ ಏನಾಗಲಿದೆ ಅಂತ ಕಾದು ನೋಡುತ್ತೇವೆ ಅಂತ ಬಿಎಸ್ವೈ ಪ್ರತಿಕ್ರಿಯಿಸಿದ್ರು.

ಇನ್ನು ನಮಗೆ ಬಂದಿರುವ ಮಾಹಿತಿ‌ ಪ್ರಕಾರ ಕಾಂಗ್ರೆಸ್, ಜೆಡಿಎಸ್ ನಲ್ಲಿ 20 ಕ್ಕೂ ಹೆಚ್ಚು ಅತೃಪ್ತ ಶಾಕರಿದ್ದಾರೆ ಅವರು ಏನು ನಿಲುವು ತೆಗೆದುಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.ಆದರೆ ಸರ್ಕಾರ ಪತನಗೊಂಡರೆ ಯಾವುದೇ ಕಾರಣಕ್ಕೂ ಚುನಾವಣೆಗೆ ಹೋಗಲ್ಲ.ಅಂತಹ ಸ್ಥಿತಿ ಬಂದರೆ ನಾವು ಸರ್ಕಾರ ರಚಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಸರ್ಕಾರ ರಚನೆಯ ಸುಳಿವು ನೀಡಿದರು.

ದಕ್ಷಿಣ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು..! ರೆಡಿಯಾಗ್ತಿದೆ ಮಿಷನ್ ಸೌತ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=DCj_CHXQo0c


About The Author