ಕರ್ನಾಟಕ ಟಿವಿ : ಕುಮಾರಸ್ವಾಮಿ ಸರ್ಕಾರ ವಿಶ್ವಾಸಮತದಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 13 ಶಾಸಕರು ಮುಂಬೈ ಸೇರಿದ್ರೆ, ಡಾ ಸುಧಾಕರ್, ಆನಂದ್ ಸಿಂಗ್, ರೋಷನ್ ಬೇಗ್ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲಅಂತ ಖಡಕ್ ಆಗಿ ಹೇಳಿದ್ದಾರೆ. ಇತ್ತ ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸ್ತೀವಿ ಅಂತ ರಾಜ್ಯಪಾಲರಿಗೆ ಪತ್ರ ಕೂಡ ಕೊಟ್ಟಿದ್ದಾರೆ..
ದೋಸ್ತಿ ಬೆಂಬಲಿಸುವಂತೆ ಮಹೇಶ್ ಗೆ ಮಾಯಾವತಿ ಸೂಚನೆ..!
ಈ ನಡುವೆ ಬೆಳಗ್ಗೆಯಷ್ಟೆ ಬಿಎಸ್ಪಿ ಶಾಸಕ ಮಹೇಶ್ ಮಯಾವತಿ ತಟಸ್ಥವಾಗಿರುವಂತೆ ಸೂಚಿಸಿದ್ದಾರೆ ಅಂತ ಕುಮಾರಸ್ವಾಮಿಗೆ ಶಾಕ್ ನೀಡಿದ್ರು. ಆದ್ರೀಗಾ ಸ್ವತಃ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ದೋಸ್ತಿ ಸರ್ಕಾರಕ್ಕೆ ಬೆಂಬಲಿಸುವಂತೆ ಬಿಎಸ್ಪಿಯ ಏಕೈಕ ಶಾಸಕ ಮಹೇಶ್ ಗೆ ಸೂಚನೆ ಕೊಟ್ಟಿದ್ದಾರೆ.
ವಿಧಾನಸಭೆಯಲ್ಲಿ ದೋಸ್ತಿಗಳು ಹಾಗೂ ಬಿಜೆಪಿ ಬಲಾಬಲ ಎಷ್ಟು..?
ಇನ್ನು 224 ಸದಸ್ಯ ಬಲದ ವಿಧಾನಸಭೆಯಲ್ಲಿ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಆಸ್ಪತ್ರೆ ಸೇರಿದ್ದಾರೆ.. ಹೀಗಾಗಿ 16 ಶಾಸಕರು ವಿಶ್ವಾಸಮತಕ್ಕೆ ಗೈರಾಗೋದು ಗ್ಯಾರಂಟಿಯಾಗಿದೆ.. 16 ಶಾಸಕರು ಗೈರಾದರೆ ಸದಸ್ಯ ಬಲ 208ಕ್ಕೆ ಕುಸಿಯಲಿದೆ.. ಆಗ ಬಹುಮತಕ್ಕೆ 105 ಶಾಸಕರು ಸಾಕು.. ಸದ್ಯ ಬಿಜೆಪಿಯೊಂದೇ 105 ಶಾಸಕರ ಬಲವನ್ನ ಹೊಂದಿದೆ. ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸಿರುವ ಕಾರಣ ಬಿಜೆಪಿ ಬಲ 107 ಆಗಲಿದೆ. ಕಾಂಗ್ರೆಸ್ 13 ಶಾಸಕರ ರಾಜೀನಾಮೆ ಹಾಗೂ ಶ್ರೀಮಂತ್ ಪಾಟೀಲ್ ಗೈರಿನಿಂದ 65ಕ್ಕೆ ಕಾಂಗ್ರೆಸ್ ಬಲ ಕುಸಿದಿದೆ. ಇನ್ನು ಜೆಡಿಎಸ್ ನ 3 ಶಾಸಕರ ರಾಜೀನಾಮೆಯಿಂದ ಜೆಡಿಎಸ್ ಬಲ 34 ಕ್ಕೆ ಕುಸಿದಿದೆ.. ಬಿಎಸ್ಪಿ ಶಾಸಕ ಮಹೇಶ್ ಬೆಂಬಲ ಸೇರಿ ದೋಸ್ತಿ ಬಲ ಒಟ್ಟು 100 ಆಗಲಿದೆ.. ಸದಸ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡೋದು ಕಷ್ಟ.. ಒಂದು ವೇಳೆ ರಾಜೀನಾಮೆ ಕೊಟ್ಟಿರುವ 8 ಶಾಸಕರು ಸದನ್ಕೆ ಬಂದು ಕುಮಾರಸ್ವಾಮಿ ಪರ ಮತ ಹಾಕಿದ್ರೆ ಮಾತ್ರ ದೋಸ್ತಿ ಸರ್ಕಾರ ಗೆಲುವು ಸಾಧಿಸಲಿದೆ. ಇಲ್ಲದಿದ್ರೆ ಕುಮಾರಸ್ವಾಮಿ ಸರ್ಕರ ಪತನವಾಗೋದು ಗ್ಯಾರಂಟಿ..