Saturday, October 5, 2024

Latest Posts

ಸುಮಲತಾ ಕೈ ಹಿಡಿದ ಮಂಡ್ಯ ಸ್ವಾಭಿಮಾನಿ ಜನರಿಗೆ ರಾಕ್ ಲೈನ್ ಗೌರವ..!

- Advertisement -

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವಿಗೆ ಕಾರಣರಾದ ಮಂಡ್ಯ ಜನತೆ ಕುರಿತಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಮಂಡ್ಯ ಸ್ವಾಭಿಮಾನಿ ಜನರಿಗೆ ಹೊಸದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಮ್ಮ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಮೊದಲಿಗೆ ಮಂಡ್ಯ ಸ್ವಾಭಿಮಾನಿ ಜನರನ್ನು ಸ್ಮರಿಸಿದ್ದಾರೆ.

ಲೋಕಸಭಾ ಚುನಾವಣೆ ನಂತರ ಬಿಡುಗಡೆಯಾಗಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ರಾಧಿಕಾ ಪಂಡಿತ್, ನಿರೂಪ್ ಬಂಡಾರಿ ಅಭಿನಯದ ಆದಿಲಕ್ಷ್ಮಿ ಪುರಾಣ ಚಿತ್ರದಲ್ಲಿ ಮಂಡ್ಯದ ಸ್ವಾಭಿಮಾನಿ ಜನರಿಗೆ ಗೌರವ ಸಲ್ಲಿಸಲಾಗಿದೆ. ನಿನ್ನೆ ಬಿಡುಗಡೆಯಾದ ರಾಕ್ ಲೈನ್ ನಿರ್ಮಾಣದ ಈ ಚಿತ್ರದ ಶುರುವಾತಿನಲ್ಲಿ ಮೊದಲಿಗೆ ‘ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಆಶೀರ್ವಾದದೊಂದಿಗೆ’ ಅಂತ ಟೈಟಲ್ ಕಾರ್ಡ್ ನಲ್ಲಿ ತಮ್ಮ ಆಪ್ತರಾದ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾದ ಮಂಡ್ಯ ಜನತೆಯನ್ನು ರಾಕ್ ಲೈನ್ ಸ್ಮರಿಸಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಅಪಾರ ಪ್ರಭಾವವಿದ್ದರೂ ಮಂಡ್ಯ ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದ ಸುಮಲತಾರ ಕೈಹಿಡಿದಿದ್ರು. ಇದರಿಂದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಂಡ್ಯ ಜನರು ತಾವು ಏನು ಅನ್ನೋದನ್ನ ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ ಅಂತ ಮತದಾದರಿಗೆ ಕೃತಜ್ಞತೆ ಅರ್ಪಿಸಿದ್ರು. ಹೀಗಾಗಿ ಮಂಡ್ಯ ಜನರಿಗೆ ಹೊಸ ರೀತಿಯಲ್ಲಿ ಏನಾದ್ರೂ ಮಾಡಬೇಕು ಅಂತ ಯೋಜನೆ ಮಾಡಿದ್ದ ರಾಕ್ ಲೈನ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಾವು ನಿರ್ಮಿಸೋ ಪ್ರತಿಯೊಂದು ಚಿತ್ರದ ಟೈಟಲ್ ಕಾರ್ಡ್ ನಲ್ಲಿ ‘ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಆಶೀರ್ವಾದದೊಂದಿಗೆ’ ಅಂತ ಸಿನಿಮಾ ಆರಂಭಿಸಲು ನಿರ್ಧರಿಸಿದ್ರು. ಈ ವಿಷಯವನ್ನು ಸ್ವತಃ ರಾಕ್ ಲೈನ್ ವೆಂಕಟೇಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ರು

ಇದೀಗ ನಿರ್ಮಾಪಕ ರಾಕ್ ಲೈನ್ ಆಡಿದ ಮಾತಿನಂತೆ ನಡೆದುಕೊಂಡು ಸಿನಿಮಾ ನೋಡೋಕೂ ಮುಂಚೆ ಮಂಡ್ಯ ಜನತೆಯ ಸ್ವಾಭಿಮಾನವನ್ನು ಪ್ರತಿಯೊಬ್ಬ ಪ್ರೇಕ್ಷಕರಿಗೂ ರಾಕ್ ಲೈನ್ ವೆಂಕಟೇಶ್ ಎತ್ತಿತೋರಿದ್ದಾರೆ.

- Advertisement -

Latest Posts

Don't Miss