Saturday, May 25, 2024

Latest Posts

ಬುಧವಾರದಿಂದ ಮೂರು ಬೆಳಗಾವಿಯಲ್ಲಿ ಶೆಟ್ಟರ್ ಪರ ಬಿಎಸ್‌ವೈ ಭರ್ಜರಿ ಕ್ಯಾಂಪೇನ್..

- Advertisement -

Hubli News: ಹುಬ್ಬಳ್ಳಿ: ಜಗದೀಶ್ ಶೆಟ್ಟರ್‌ಗೆ ಬಿ‌.ಎ‌ಸ್. ಯಡಿಯೂರಪ್ಪ ಕರೆ ಮಾಡಿ ಮಾತನಾಡಿದ್ದು, ಟಿಕೇಟ್ ಸಿಕ್ಕಿದ್ದಕ್ಕಾಗಿ ಶುಭ ಹಾರೈಸಿದ್ದಾರೆ.

ಅಲ್ಲದೇ, ಬೆಳಗಾವಿಯಲ್ಲಿ ಪ್ರಚಾರಕ್ಕೆ ಆಗಮಿಸುವುದಾಗಿ ಹೇಳಿದ್ದಾರೆ. ಮೂರು ದಿನ ಬೆಳಗಾವಿಗೆ ಬಂದು, ಶೆಟ್ಟರ್ ಜೊತೆ ಪ್ರಚಾರ ಮಾಡುತ್ತೇನೆ ಎಂದು ಬಿಎಸ್‌ವೈ ಹೇಳಿದ್ದಾರೆ. ಬುಧವಾರದಿಂದ ಬೆಳಗಾವಿಯಲ್ಲಿ ಮೂರು ದಿನ ಪ್ರಚಾರ ನಡೆಸಲಿದ್ದಾರೆ.

ಇನ್ನು ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಶೆಟ್ಟರ್, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ‌ ಪ್ರಧಾನಿಯಾಗಿ ಮಾಡಬೇಕು ಅನ್ನೋದು ಎಲ್ಲರ ಇಚ್ಛೇ. ಬೆಳಗಾವಿಯ ಎಲ್ಲಾ ನಾಯಕರ ಜೊತೆ ಮಾತಾಡಿದ್ದೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಮಾಡೋಣ ಅಂದಿದ್ದಾರೆ. ಬುಧವಾರದಿಂದ ಬೆಳಗಾವಿಗೆ ತೆರಳಿ ಪ್ರಚಾರ ಪ್ರಾರಂಭಿಸುತ್ತೇನೆ. ನಾನು ಬೆಳಗಾವಿ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಯುವಕ ಅನ್ನೋ ಕಾರಣಕ್ಕೆ ನೆಗ್ಲೆಕ್ಟ್ ಮಾಡಲ್ಲಾ. ಈ ಚುನಾವಣೆಯಲ್ಲಿ ಜಾತಿ ಫ್ಯಾಕ್ಟರ್ ಕೆಲಸ ಮಾಡಲ್ಲಾ. ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾನು ಗೆದ್ದು ಬರುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.

ಈ ಚುನಾವಣೆಯನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಹುಬ್ಬಳ್ಳಿ ನನ್ನ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ. ಬೆಳಗಾವಿಯನ್ನು ಕರ್ಮಭೂಮಿಯಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಮಂಗಳಾ ಅಂಗಡಿ ಸೇರಿದಂತೆ ಕುಟುಂಬಸ್ಥರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂಗಡಿಯವರ ಕುಟುಂಬ ನನ್ನ ಪರ ಪ್ರಚಾರ ಮಾಡುತ್ತಾರೆ. ಜಾರಕಿಹೋಳಿಯವರು ನಿರಂತರ ಸಂಪರ್ಕದಲ್ಲಿದ್ದು ನಮಗೆ ಬೆಂಬಲ ಕೊಡುತ್ತಾರೆ. ಜನಾರ್ಧನ ರೆಡ್ಡಿ ಈ ಹಿಂದೆ ಬಿಜೆಪಿ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿಗೆ ಅಸ್ತಿತ್ವವೇ ಇಲ್ಲದಾಗ ಸಂಘಟನೆ ಮಾಡಿದ್ದಾರೆ.ಜನಾರ್ಧನ ರೆಡ್ಡಿಯವರ ಹಾಗೆ ಸಾಕಷ್ಟು ಜನರು ಬಿಜೆಪಿಗೆ ಬರ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..

ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿಗೆ ಬಂದಿದ್ದು, ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ: ಶ್ರೀರಾಮುಲು

ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ: ಹಲವರಿಗೆ ಗಾಯ

- Advertisement -

Latest Posts

Don't Miss