ಬೆಂಗಳೂರು: ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರೋ ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಲಿದ್ದಾರೆ.
ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರೋ ಯಡಿಯೂರಪ್ಪ ವಿಧಾನಸಭೆಯಲ್ಲಿ ಮತ್ತೆ ಬಹುಮತ ಸಾಬೀತು ಪಡಿಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ವಿಶ್ವಾಸಮತ ಯಾಚನೆ ವೇಳೆ ಮುನ್ನಡೆ ಸಾಧಿಸಿದ ಬಿಜೆಪಿಗೆ ಇದೀಗ ಬಹುಮತ ಸಾಬೀತುಪಡಿಸುವ ದೊಡ್ಡ ಜವಾಬ್ದಾರಿ ಎದುರಾಗಿದೆ. ಈ ಕುರಿತು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ರೊಂದಿಗೆ ಚರ್ಚೆ ನಡೆಸಿದ ಯಡಿಯೂರಪ್ಪ, ಸೋಮವಾರವೇ ಬಹುಮತ ಸಾಬೀತು ಪಡಿಸೋದಾಗಿ ತಿಳಿಸಿದ್ದಾರೆ.
ಇನ್ನು ನಿಯೋಜಿತ ಸಿಎಂ ಯಡಿಯೂರಪ್ಪನವರ ಮನವಿಗೆ ಸ್ಪಂದಿಸಿರುವ ಸ್ಪೀಕರ್ ರಮೇಶ್ ಕುಮಾರ್ ಸೋಮವಾರವೇ ಸದನ ಕರೆಯುವುದಾಗಿ ತಿಳಿಸಿದ್ದಾರೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಶೀಘ್ರವೇ ಮುಗಿಸಿ ಸರ್ಕಾರ ರಚನೆ ಮಾಡೋ ಆತುರದಲ್ಲಿದ್ದ ಬಿಜೆಪಿ ಇದೀಗ ಬಹುಮತ ಸಾಬೀತಿಗೆ ಒಂದು ವಾರದ ಕಾಲ ಸಮಾಯಾವಕಾಶವಿದ್ದರೂ ಸೋಮವಾರವೇ ಬಹುಮತ ಸಾಬೀತುಪಡಿಸಲು ಹೊರಟಿದೆ. ಇದಾದ ಬಳಿಕ ಸಂಪುಟ ರಚನೆ ಕುರಿತು ಬಿಜೆಪಿ ನಿರ್ಧಾರ ಕೈಗೊಳ್ಳಲಿದೆ.