Monday, April 14, 2025

Latest Posts

ಬೆಂಗಳೂರಿನ ಲಕ್ಕಸಂದ್ರದಲ್ಲಿ ಕಟ್ಟಡ ಕುಸಿತ…!

- Advertisement -

ಬೆಂಗಳೂರು: ಬೆಂಗಳೂರಿನ ಲಕ್ಕಸಂದ್ರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಕುಸಿದುಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇಂದು ಬೆಳಗ್ಗೆ 10.30ರ ಸುಮಾರಿನಲ್ಲಿ ಸಿಲಿಕಾನ್ ಸಿಟಿಯ ಮೂರಂತಸ್ಥಿನ ಕಟ್ಟಡವೊಂದು ಕುಸಿದುಬಿದ್ದಿದೆ. ಇಲ್ಲಿನ ಲಕ್ಕಸಂದ್ರದಲ್ಲಿ ಈ ಘಟನೆ ನಡೆದಿದ್ದು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡ ಇಂದು ಏಕಾಏಕಿ ಕುಸಿದಿದೆ. ಇನ್ನು ಈ ಕಟ್ಟಡದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ವಾಸವಿದ್ದರು ಎನ್ನಲಾಗಿದೆ. ಈ ಕಟ್ಟಡದಲ್ಲಿ ಬಹುತೇಕ ಮೆಟ್ರೋ ಕಾಮಗಾರಿ ಕಾರ್ಮಿಕರು ವಾಸವಿದ್ದರು. ಇನ್ನು ಇಂದು ಬೆಳಗ್ಗೆ ಅವರೆಲ್ಲರೂ ಕೆಲಸಕ್ಕೆ ತೆರಳಿದ್ದ ವೇಳೆ ಈ ಕಟ್ಟಡ ಕುಸಿದಿದೆ. ಹೀಗಾಗಿ ಯಾವ ಪ್ರಾಣಹಾನಿಯೂ ಸಂಭವಿಸಿಲ್ಲ. ಘಟನೆ ನಡೆದ ವೇಳೆ ಮನೆಯೊಂದರಲ್ಲಿ ಕುಟಂಬವೊಂದು ವಾಸವಿತ್ತು. ಅದೃಷ್ಟವಶಾತ್ ಅವರೆಲ್ಲರೂ ಪಾರಾಗಿದ್ದಾರೆ. ಘಟನೆಯಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ.

ಇನ್ನು ಈ ಪ್ರಕರಣ ಕುರಿತು ಕಟ್ಟಡ ಮಾಲೀಕ ಸುರೇಶ್ ಎಂಬುವರ ಮೇಲೆ ದೂರು ದಾಖಲಾಗಿದೆ.

ಕರ್ನಾಟಕ ಟಿವಿ- ಚಾಮರಾಜನಗರ

youtube.com/watch?v=BwMZ7SYXFDE

- Advertisement -

Latest Posts

Don't Miss