Dharwad News: ಕಲಘಟಗಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ, ಚಿರತೆಗಳ ಗುಂಪಿನ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನ ಕಟ್ಟಿ ಹಾಕಲಾಗಿತ್ತು. ಎರಡು ಎತ್ತುಗಳಲ್ಲಿ ಒಂದು ಕಾಣೆಯಾಗಿತ್ತು. ಬೆಳಗ್ಗೆ ತಾನಾಗಿಯೇ ಒಂದು ಎತ್ತು ಮನೆಯತ್ತ ಮರಳಿತ್ತು. ಆದ್ರೆ ಇನ್ನೊಂದು ಎತ್ತು ಕಾಣದಿದ್ದಾಗ ರೈತ ಕಬ್ಬಿನ ಗದ್ದೆಯಲ್ಲಿ ಹುಡುಕಾಟ ನಡೆಸಿದ್ದಾನೆ. ಆಗ ಒಂದು ತಾಯಿ ಚಿರತೆ ಹಾಗೂ ಎರಡು ಮರಿ ಚಿರತೆಗಳು ಸೇರಿಬಎತ್ತನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ತಿಂದು ಹಾಕಿವೆ. ಚಿರತೆಗಳು ಎತ್ತನ್ನು ತಿನ್ನುವುದನ್ನು ಕಂಡ ರೈತ ಪ್ರಾಣಭಯದಿಂದ ಅಲ್ಲಿಂದ ಓಡಿ ಬಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ದಾಳಿಯಿಂದ ಕಲಘಟಗಿ ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಜನರು ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಚಿರತೆಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು
ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಸಚಿವ ರಾಜಣ್ಣ ಹೇಳಿದ್ದೇನು..?
ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ