International News:ನಮ್ಮ ಸೇನೆ ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಇನ್ನು ಗಾಜದಲ್ಲಿ ಹಮಾಸ್ ಉಗ್ರರನ್ನು ರಕ್ಷಣೆ ಮಾಡುವವರು ಯಾರೂ ಇಲ್ಲ ಎಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಮಾತನ್ನು, ಅವರ ಸೇನಾ ಪಡೆ ಸತ್ಯ ಮಾಡಿ ತೋರಿಸುತ್ತಿದೆ. ನಿನ್ನೆ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದ, ಇಸ್ರೇಲ್ ಸೇನೆ, ಇಂದು ಗಾಜಾದಲ್ಲಿನ, ಉಗ್ರರ ಎಲ್ಲ ಅಡಗುತಾಣಗಳ ಮೇಲೆ ಬುಲ್ಡೋಜರ್ ಅಟ್ಯಾಕ್ ಮಾಡಿದೆ.
ಈ ಮೊದಲೇ ಅಲ್ ಶಿಫಾ ಆಸ್ಪತ್ರೆ, ಉಗ್ರರ ನೆಲೆಯಾಗಿದೆ ಎಂದು ಇಸ್ರೇಲ್ ಹಲವು ಬಾರಿ ಹೇಳಿತ್ತು. ಅದರಂತೆ, ಸೈಲೆಂಟ್ ಆಗಿ, ಕಾರ್ಯಾಚರಣೆ ಕೂಡ ನಡೆಸಿತ್ತು. ಮೊನ್ನೆ ಅಲ್ ಶಿಫಾ ಆಸ್ಪತ್ರೆ ಮೇಲೆ ಏಕಾಏಕಿ ದಾಳಿ ಮಾಡಿ, ಉಗ್ರರನ್ನು, ಅವರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು, ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಇಂದು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಉಗ್ರರಿಗೆ ಸೇರಿದ ಎಕೆ47, ಗ್ರೈನೇಡ್ ಸೇರಿ ಹಲವು ಶಸ್ತ್ರಾಸ್ತ್ರಗಳು ಸಿಕ್ಕಿದೆ ಎಂದು ಹೇಳಿದೆ.
ಇಷ್ಟೇ ಅಲ್ಲದೇ, ಗಾಜಾದ ಅತೀ ದೊಡ್ಡ ಆಸ್ಪತ್ರೆಯಾಗಿರುವ ಅಲ್ ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಸೇನೆ ಇಂಚಿಂಚು ಜಾಲಾಡಿದ್ದು, ಆಸ್ಪತ್ರೆಯ ಕೆಲವು ಸ್ಥಳಗಳ ಮೇಲೆ ಬುಲ್ಡೋಜರ್ ದಾಳಿ ಕೂಡ ಮಾಡಿದೆ ಎಂಬ ವರದಿ ಇದೆ. ಆಸ್ಪತ್ರೆಯಲ್ಲಿ ಹಮಾಸ್ ಸೇನಾ ಉಪಕರಣಗಳು, ಗುಪ್ತಚರ ಸಾಮಗ್ರಿಗಳು, ಹಮಾಸ್ ಯೂನಿಫಾರ್ಮ್ ಎಲ್ಲವೂ ಪತ್ತೆಯಾಗಿದೆ.
ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ, ಹಮಾಸ್ ಉಗ್ರರು, ಮಿಷನ್‌ಗಳ ಅಡಿಯಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿದ್ದಾರಂತೆ. ಆದರೂ ಕೂಡ ಇಸ್ರೇಲ್ ಸೇನೆ ಅವುಗಳನ್ನೆಲ್ಲ ಹುಡುಕಿ ತೆಗೆದಿದೆ. ಒಂದೆಡೆ ಗಾಜಾವನ್ನು ನಿಶಸ್ತ್ರೀಕರಣ ಮಾಡುವ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಸೇನೆಯ ಪ್ರಯತ್ನ ಮುಂದುವರಿದಿದ್ದರೆ, ಇನ್ನೊಂದೆಡೆ ಇಸ್ರೇಲ್ ಭಯೋತ್ಪಾದಕ ರಾಷ್ಟ್ರ, ಹಮಾಸ್ ತನ್ನ ಸ್ವತಂತ್ರಕ್ಕಾಗಿ ಹೋರಾಡುತ್ತಿದೆ ಎಂದು, ಶತ್ರು ರಾಷ್ಟ್ರಗಳು ವಾಗ್ದಾಳಿ ನಡೆಸುತ್ತಿದೆ.
ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ
ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು
ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್