ಚಿಕ್ಕಮಗಳೂರು: ಆನೆ ಪ್ರತ್ಯಕ್ಷವಾಗಿದ್ದನ್ನು ಕಂಡು ಸರ್ಕಾರಿ ಬಸ್ ಸುಮಾರು 1 ಕಿಲೋ ಮೀಟರ್ ವರೆಗೂ ಹಿಮ್ಮುವಾಗಿ ಚಲಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗ ಪದೇ ಪದೇ ಇಲ್ಲಿನ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಉಪಟಳ ನೀಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಕಿರಿದಾದ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದನ್ನು ಕಂಡು ಹೌಹಾರಿದ ಸರ್ಕಾರಿ ಬಸ್ ಚಾಲಕ, ಬೇರೆ ದಾರಿಯಿಲ್ಲದೆ ಸುಮಾರು 1 ಕಿಲೋ ಮೀಟರ್ ರಿವರ್ಸ್ ಗೇರ್ ನಲ್ಲಿ ಬಸ್ ಚಲಾಯಿಸಿದ್ದಾರೆ.
ಇನ್ನು ಇದೇ ಜಾಗದಲ್ಲಿ ಈ ಒಂಟಿ ಸಲಗ ಹಣ್ಣು ತುಂಬಿದ್ದ ಟೆಂಪೋವನ್ನು ಅಡ್ಡಗಟ್ಟಿ ಹಣ್ಣನ್ನೆಲ್ಲಾ ತಿಂದ ಬಳಿಕ ಟೆಂಪೋವನ್ನು ರಸ್ತೆ ಬದಿಗೆ ನೂಕಿತ್ತು. 3 ತಿಂಗಳ ಅವಧಿಯಲ್ಲಿ ಇಲ್ಲಿ ಸಲಗನ ದಾಳಿಯಿಂದಾಗಿ ಇಬ್ಬರು ಬಲಿಯಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲೂ ಅರಣ್ಯವಿರೋದ್ರಿಂದ ಒಂಟಿ ಸಲಗ ಯಾವ ಕ್ಷಣದಲ್ಲಾದ್ರೂ ಪ್ರತ್ಯಕ್ಷವಾಗಬಹುದು. ಕೂಡಲೇ ಅರಣ್ಯ ಅಧಿಕಾರಿಗಳು ಒಂಟಿ ಸಲಗನನ್ನ ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಬಿಎಸ್ ವೈ ಗೆ ಅಮಿತ್ ಶಾ ಶಾಕ್…! ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ತಪ್ಪದೇ ನೋಡಿ.