ಪ್ರಪಾತಕ್ಕೆ ಬಿದ್ದ ಬಸ್ಸು

 

ಮನೆಯಿಂದ ಹೊರಟ ವ್ಯಕ್ತಿ ವಾಪಸ್ ಮನೆಗೆ ಬರುತ್ತಾರಂಬ ನಂಬಿಕೆ ಇತ್ತೀಚಿನ ದಿನಗಳಲ್ಲಿ ಹುಸಿಯಾಗುತ್ತಿದೆ.ಅದರಲ್ಲೂ ವಾಹನದಲ್ಲಿ ಹೋದ ವ್ಯಕ್ತಿ ಬರುವುದಂತೂ ಗ್ಯಾರಂಟಿನೇ ಇಲ್ಲದಂತಾಗಿದೆ. ನಾವು ಸರಿಯಾಗಿದ್ದರೂ ನಮ್ಮ ಮುಂದೆ ಅಥವಾ ಹಿಂದೆ ಬರುವವರು ಸರಿಯಾಗಿ ವಾಹನ ಓಡಿಸುತ್ತಾರೆಂದು ಗೊತ್ತಿರುವುದಿಲ್ಲ ಇಗ ಅದೇರೀತಿ ಮನೆಗೆ ವಾಪಸ್ಸು ಬರುತ್ತೇವೆಂಬ ನಂಬಿಕೆಯಿAದ ಹೊರಟವರು ವಾಪಾಸಾದದ್ದೂ ಮಾತ್ರ ಹೆಣವಾಗಿ

ವಾಯುವ್ಯ ಪೆರುವಿನಲ್ಲಿ ಬಸ್ಸೊಂದು ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ 24 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.ಕೊರಿಯಾಂಕಾ ಟೂರ್ಸ್ ಕಂಪನಿಗೆ ಸೇರಿದ ಬಸ್ 60 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಲಿಮಾದಿಂದ ಹೊರಟ ಬಸ್ ಈಕ್ವೆಡಾರ್ ಗಡಿಯಲ್ಲಿರುವ ತುಂಬೆಸ್‌ಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.”ಡೆವಿಲ್ಸ್ ಕರ್ವ್” ಎಂದು ಕರೆಯಲ್ಪಡುವ ಸ್ಥಳದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪೊಲೀಸರು ಮಾಹಿತಿ ನೀಡಿದ್ದಾರೆ.ಘಟನೆ ವೇಳೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಕ್ಷಣೆ ಮಾಡಿರುವ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?

ಗಣಿತ ಶಾಸ್ತ್ರಜ್ಞ ಹಾಗೂ ಸೂಪರ್​ 30 ಆನಂದ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ

ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ: ರಿಷಭ್ ಶೆಟ್ಟಿ

About The Author