ಮೊದಲ ಭಾಗದಲ್ಲಿ ನಾವು ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಪ್ಪಳ-ಉಪ್ಪಿನಕಾಯಿ ಉದ್ಯಮ. ಇದು ಹಳೆಯ ಕಾಲದಿಂದಲೂ, ಮಹಿಳೆಯರು ಮಾಡಿಕೊಂಡು ಬಂದ ಉದ್ಯಮ. ನೀವು ಮಾಡುವ ಹಪ್ಪಳ ಉಪ್ಪಿನಕಾಯಿ ರುಚಿ ಮತ್ತು ಕ್ವಾಲಿಟಿ ಉತ್ತಮವಾಗಿದ್ದರೆ, ಗ್ರಾಹಕರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಇನ್ನು ನೀವು ಈ ಆಹಾರವನ್ನು ತಯಾರಿಸುವ ಜಾಗ ಸ್ವಚ್ಛವಾಗಿರಿಸಿಕೊಳ್ಳಿ. ಯಾಕಂದ್ರೆ ಅಪ್ಪಿ ತಪ್ಪಿ, ನಿಮ್ಮ ಅಕ್ಕಪಕ್ಕದ ಮನೆಯವರು, ನೀವು ಉದ್ಯಮ ಮಾಡುವ ಪರಿ ನೋಡಲು ಬಂದರೆ, ಅವರ ಕಣ್ಣಿಗೆ ನೀವು ಆಹಾರ ತಯಾರಿಸುವ ಜಾಗ, ಗಲೀಜಾಗಿ ಕಂಡರೆ, ಅವರು ಈ ಬಗ್ಗೆ ಬೇರೆಯವರಲ್ಲಿ ಹೇಳಬಹುದು. ಆಗ ನಿಮ್ಮ ಉದ್ಯಮದಲ್ಲಿ ನಷ್ಟವಾಗಲೂಬಹುದು. ಹಾಗಾಗಿ ಸ್ವಚ್ಛತೆ ಇರಲಿ.
ಹೋಮ್ ಗಾರ್ಡೆನಿಂಗ್. ಅಂದ್ರೆ ಮನೆಯಲ್ಲಿ ಗಿಡ ನೆಟ್ಟು, ಅದರ ಮೊದಲು ಬೆಳೆ ಬರುವವರೆಗೂ ಇಟ್ಟುಕೊಂಡು, ಅದನ್ನ ಸೇಲ್ ಮಾಡುವುದು. ಅಂದ್ರೆ ಹೂವು, ಹಣ್ಣು, ತರಕಾರಿ ಗಿಡವನ್ನು ನೆಟ್ಟು, ಒಂದು ಹಣ್ಣು, ತರಕಾರಿ, ಹೂವು ಬೆಳೆಯುವವರೆಗೂ ಇಟ್ಟು, ನಂತರ ಅದನ್ನ ಮಾರುವುದು.
ಟ್ಯೂಶನ್ ನೀಡುವುದು. ಮನೆಯಲ್ಲೇ ಕುಳಿತು ಮಕ್ಕಳಿಗೆ ಟ್ಯೂಶನ್ ನೀಡುವುದು ಸುಲಭದ ವಿಷಯವಲ್ಲ. ಯಾಕಂದ್ರೆ ಇಂದು ಹಲವು ಮಕ್ಕಳು ಇಂಗ್ಲೀಷ್ ಮಿಡಿಯಂಗೆ ಹೋಗುತ್ತಿದ್ದಾರೆ. ಹಾಗಾಗಿ ನೀವು ಟ್ಯೂಶನ್ ತೆಗೆದುಕೊಳ್ಳುವುದಿದ್ದರೆ, ನಿಮಗೆ ಇಂಗ್ಲಿಷ್ ಭಾಷೆಯ ಬಗ್ಗೆ ತಿಳುವಳಿಕೆ ಇರುವುದು ಮುಖ್ಯವಾಗಿದೆ.
ಸೀರೆ, ಡ್ರೆಸ್ ಸೇಲ್ ಮಾಡುವುದು. ನೀವು ಹೋಲ್‌ಸೇಲ್ ದರದಲ್ಲಿ ಸೀರೆ, ಬಟ್ಟೆ ತಂದು ಮಾರಾಟ ಮಾಡಬಹುದು. ಆದ್ರೆ ನೆನಪಿರಲಿ, ಬಂದ ಗ್ರಾಹಕರ ಜೊತೆ ಚೆನ್ನಾಗಿ ಮಾತನಾಡುವುದು ಗೊತ್ತಿರಬೇಕು. ಅಲ್ಲದೇ, ನೀವು ಸೇಲ್ ಮಾಡುವ ಬಟ್ಟೆ ಕ್ವಾಲಿಟಿ ಉತ್ತಮವಾಗಿರಬೇಕು. ನಿಮ್ಮ ಮಾತಿನಲ್ಲಿ ಮತ್ತು ನೀವು ಸೇಲ್ ಮಾಡುವ ಬಟ್ಟೆ ಕ್ವಾಲಿಟಿಯಲ್ಲಿ ಸ್ವಲ್ಪ ಅಡೆತಡೆ ಬಂದರೂ, ನಿಮಗೆ ನಷ್ಟವಾಗೋದು ಖಚಿತ.
ಯೂಟ್ಯೂಬ್, ವೆಬ್‌ಸೈಟ್ ಕೆಲಸ. ನೀವು ಮನೆಯಲ್ಲೇ ಕುಳಿತು ಯೂಟ್ಯೂಬ್ ಚಾನೆಲ್, ವೆಬ್‌ಸೈಟ್ ಶುರು ಮಾಡಬಹುದು. ವೆಬ್‌ಸೈಟ್ ಶುರು ಮಾಡಲು 30 ಸಾವಿರದವರೆಗೆ ಬಂಡವಾಳ ಹೂಡಬೇಕಾಗುತ್ತದೆ. ಯೂಟ್ಯೂಬ್ ಶುರು ಮಾಡುವುದಾದರೆ, ಅಡುಗೆ ಚಾನೆಲ್, ಮೇಕಪ್ ಮಾಡುವುದು, ವ್ಲಾಗ್, ಇತ್ಯಾದಿ ಬಗ್ಗೆ ನೀವು ಚಾನೆಲ್ ಶುರು ಮಾಡಬಹುದು.