Business Tips: ಮಾರ್ವಾಡಿಗಳು ಯಾಕೆ ಉದ್ಯಮದಲ್ಲಿ ನಿಪುಣರಿರುತ್ತಾರೆ ಗೊತ್ತಾ..?

Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ.

ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ ಉದ್ಯಮ ಮಾಡುವ ಹಂತಕ್ಕೆ ಹೋಗಿದ್ದಾರೆ.

ಮಾರ್ವಾಡಿಗಳು ಇತರರ ಕೈ ಕೆಳಗೆ ಕೆಲಸ ಮಾಡುವುದು ತುಂಬಾ ಅಪರೂಪ. ಯಾಕಂದ್ರೆ, ಇವರು ತಮ್ಮದೇ ಆದ ಅಂಗಡಿಗಳನ್ನು ಹೊಂದಿರುತ್ತಾರೆ. ಇವರಿಗೆ ಉದ್ಯೋಗಕ್ಕಿಂತ, ಉದ್ಯಮದಲ್ಲಿ ತುಂಬಾ ನಂಬಿಕೆ. ಅದೇ ರೀತಿ ಉದ್ಯಮ ನಡೆಯುವ ಯೋಗ್ಯತೆ ಕೂಡ ಹೆಚ್ಚಾಗಿರುತ್ತದೆ. ದಿನಸಿ ಅಂಗಡಿ, ಸ್ನ್ಯಾಕ್ಸ್ ಅಂಗಡಿ, ಡ್ರೈಫ್ರೂಟ್ಸ್ ಅಂಗಡಿ, ಸ್ವೀಟ್ ಅಂಗಡಿ ಹೀಗೆ ತಮ್ಮದೇ ಅಂಗಡಿಯನ್ನು ಹೊಂದಿರುತ್ತಾರೆ.

ಈ ವೇಳೆ ತಮ್ಮ ಪುಟ್ಟ ಮಕ್ಕಳಿಗೂ, ಚಿಕ್ಕ ವಯಸ್ಸಿನಲ್ಲೇ ಅಂಗಡಿಯಲ್ಲಿ ತಂದು ಕೂರಿಸಿ, ವ್ಯಾಪಾರ ಮಾಡುವ ರೀತಿ ಹೇಳಿಕೊಡುತ್ತಾರೆ. ಯಾಕಂದ್ರೆ, ಮಗುವಿಗೆ ವಿದ್ಯೆ ತಲೆಗೆ ಹತ್ತಿದರೆ, ಆ ಹೆಚ್ಚು ಕಲಿತು, ದೊಡ್ಡ ಉದ್ಯಮ ಮಾಡಲಿ ಎಂದು. ವಿದ್ಯಾರ್ಹತೆ ಪೂರ್ಣಗೊಳಿಸಲು ಆಗದಿದ್ದರೆ, ತಮ್ಮದೇ ವ್ಯಾಪಾರ ಮುಂದುವರಿಸಲಿ ಎಂದು. ಈ ಎರಡೂ ಯೋಚನೆ ತಲೆಯಲ್ಲಿ ಇರಿಸಿಕೊಂಡೇ, ಮಾರ್ವಾಡಿಗಳು ತಮ್ಮ ಮಕ್ಕಳನ್ನು ರೆಡಿ ಮಾಡುತ್ತಾರೆ. ಆದರೆ ಇನ್ನೊಬ್ಬರ ಕೈ ಕೆಳಗೆ ದುಡಿಯಲಿ ಎಂದು ಎಂದಿಗೂ ಬಯಸುವುದಿಲ್ಲ.

ಇನ್ನು ಮಾರ್ವಾಡಿಗಳು ಬೇಕಾಬಿಟ್ಟಿಯಾಗಿ ಖರ್ಚು ಮಾಡೋದಿಲ್ಲ. ಅವಶ್ಯಕತೆಗೆ ತಕ್ಕಷ್ಟು ಖರ್ಚು ಮಾಡುತ್ತಾರೆ. ದುಡ್ಡನ್ನು ಇನ್ವೆಸ್ಟ್ ಮಾಡಿ, ಹಣದಿಂದ ಹಣ ಮಾಡುತ್ತಾರೆ. ರಿಯಲ್ ಎಸ್ಟೇಟ್, ಶೇರ್ ಮಾರ್ಕೇಟ್, ಮ್ಯೂಚವಲ್ ಫಂಡ್, ಗೋಲ್ಡ್ ಎಲ್ಲೆಡೆ ಇನ್ವೆಸ್ಟ್ ಮಾಡುತ್ತಾರೆ.

ಕೊನೆಯದಾಗಿ ಮಾರ್ವಾಡಿಗಳು ಶ್ರೀಮಂತರಾಗಿರಲು ಕಾರಣ, ಉದ್ಯಮದಲ್ಲಿ ಹೆಚ್ಚು ಪರಿಶ್ರಮ ಪಡುತ್ತಾರೆ. ಸಮಯಕ್ಕೆ ಸರಿಯಾಗಿ ಅಂಗಡಿ ತೆಗೆಯುವುದು. ಅಕೌಂಟ್ ಕರೆಕ್ಟ್ ಆಗಿ ಹ್ಯಾಂಡಲ್ ಮಾಡುವುದು. ಉದ್ಯಮ ಉದ್ಧಾರ ಮಾಡಲು ದೂರ ದೂರ ಪ್ರಯಾಣಿಸುವುದು, ಇವೆಲ್ಲವೂ ಅವರ ಯಶಸ್ಸಿನ ಗುಟ್ಟಾಗಿದೆ.

About The Author