ಬೈ ಟು ಲವ್ (bytwo love) ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾ (Sreeleela), ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ಮ ಕಂಡೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾದ್ರು, ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ. 8 ತಿಂಗಳ ಮಗು ‘ಗುರು’ ಹಾಗೂ ಶೋಭಿತ ಅನ್ನೋ ಹೆಣ್ಣು ಮಗಳನ್ನ ದತ್ತು ಪಡೆದ ಶ್ರೀಲೀಲಾ ಭಾವುಕರಾದ್ರು. ಸ್ಫೂರ್ತಿ ತುಂಬಿದ್ದಾರೆ. ಈ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತು (Director Hari Santu) ಶ್ರೀಲೀಲಾ ಅವ್ರಿಗೆ ಸಾಥ್ ನೀಡಿದ್ರು. ಅಂದ್ಹಾಗೆ ಶ್ರೀಲೀಲಾ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದಯಂತೆ. ಅಂಥ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಅಂತಿದ್ದಾರೆ ಶ್ರೀಲೀಲಾ. ಬೈ ಟು ಲವ್ ಚಿತ್ರ ಇದೇ 18ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.