ಭಾರೀ ನಿರೀಕ್ಷೆ ಮೂಡಿಸಿದ್ದ ಬೈ ಟೂ ಲವ್ ಇವತ್ತು ರಿಲೀಸ್ ಆಗಿದೆ. ಧನ್ವೀರ್-ಶ್ರೀಲೀಲಾ (Dhanveer-SriLeela) ಜೋಡಿಯಾಗಿರೋ ಚಿತ್ರದ ಹಾಡುಗಳು ಸೂಪರ್‌ಹಿಟ್ ಆಗಿತ್ತು. ಟ್ರೈಲರ್ (Trailer) ನೋಡಿ ಥ್ರಿಲ್ ಆಗಿದ್ದವರು ಫಸ್ಟ್ ಡೇ ಫಸ್ಟ್ ಶೋ (First Day First Show) ಸಿನಿಮಾ ನೋಡೋಕೆ ಬಂದಿದ್ರು. ಮೆಜೆಸ್ಟಿಕ್‌ನ ಮುಖ್ಯಚಿತ್ರಮಂದಿರ ಅನುಪಮದಲ್ಲಿ ಧನ್ವೀರ್-ಶ್ರೀಲೀಲಾ ಎಂಟ್ರಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಚಿತ್ರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಹರಿ ಸಂತೋಷ್ ನಿರ್ದೇಶನದ ಕೆವಿಎನ್ ಪ್ರೊಡಕ್ಷನ್ಸ್ (KVN Productions directed by Hari Santosh)ನಿರ್ಮಾಣದ ಬೈ ಟೂ ಲವ್ ಚಿತ್ರದ ಹಾಡುಗಳು ಸಖತ್ ಹವಾ ಕ್ರಿಯೇಟ್ ಮಾಡಿದ್ದವು. ಯೋಗರಾಜ್ ಭಟ್ ಬರೆದಿದ್ದ ಪ್ರೇಸ್ಟೇಷನ್ ಸಾಂಗ್, ನಾಗೇಂದ್ರ ಪ್ರಸಾದ್ ಬರೆದಿದ್ದ ನೀನೇ ನೀನೇ ಹಾಡು ಮೋಡಿ ಮಾಡಿತ್ತು. ಚಿತ್ರತಂಡ ಕೂಡ ರಾಜ್ಯಾದ್ಯಂತ ಪ್ರಚಾರ ನಡೆಸಿ ಚಿತ್ರಮಂದಿರಕ್ಕೆ ಅಭಿಮಾನಿಗಳನ್ನು ಸೆಳೆದಿತ್ತು. ಈಗ ಚಿತ್ರದಲ್ಲಿರೋ ಫ್ಯಾಮಿಲಿ ಲವ್ ಮತ್ತು ಸೆಂಟಿಮೆAಟ್ ಕಥೆ ಚಿತ್ರಪ್ರೇಮಿಗಳಿಗೆ ಇಷ್ಟವಾಗಿದೆ. ಮಾಸ್ ಹೀರೋ ಮೊದಲ ಸಿನಿಮಾದಲ್ಲಿ ಮಿಂಚಿದ್ದ ಧನ್ವೀರ್ ಗ್ಲಾö್ಯಮರ್ ಬೊಂಬೆಯಾಗಿದ್ದ ಶ್ರೀಲೀಲಾ ಇಲ್ಲಿ ಫ್ಯಾಮಿಲಿ ಕಥೆಯ ಜೊತೆ ಬೆಸ್ಟ್ ಲವ್ ಪೇರ್ ಆಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು (Rangayana Raghu) ಮತ್ತು ಸಾಧುಕೋಕಿಲ (Sadhu Kokila) ಪಾತ್ರಗಳಿದ್ದು ಕಾಮಿಡಿಗಿಂತ ಹೆಚ್ಚಾಗಿ ಮನಮುಟ್ಟುವಂತಿದ್ದು ಮನೆಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾವನ್ನು ಬೈಟೂಲವ್ ಚಿತ್ರತಂಡ ಕೊಟ್ಟಿದ್ದು ವೀಕೆಂಡ್‌ನಲ್ಲಿ ನೀವು ನೋಡಬಹುದಾದ ಸಿನಿಮಾ ಅಂದ್ರೆ ಬೈಟೂಲವ್ ಅನ್ನೋದ್ರಲ್ಲಿ ಡೌಟೇ ಇಲ್ಲ.