ಮಂಡ್ಯ: ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿ.ಟಿ.ರವಿ ಪ್ರಚಾರ ಮಾಡಿದ್ದಾರೆ. ಅಭ್ಯರ್ಥಿ ಸಚ್ಚಿದಾನಂದ ಪರ ರವಿ ಪ್ರಚಾರ ಮಾಡಿದ್ದು, ದೊಡ್ಡಪಾಳ್ಯ ಗ್ರಾಮದ ಗ್ರಾಮಸ್ಥರು ಸಿ.ಟಿ.ರವಿಗೆ ಅದ್ಧೂರಿ ಸ್ವಾಗತ ನೀಡಿದರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ಡಬಲ್ ಇಂಜಿನ್ ಸರ್ಕಾರ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿವೆ. ಬಿಜೆಪಿಗೆ ಮತ ನೀಡಿದ್ರೆ ಶ್ರೀರಂಗಪಟ್ಟಣ ಇನ್ನಷ್ಟು ಅಭಿವೃದ್ಧಿ ಆಗುತ್ತದೆ. ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದಗೆ ಮತ ನೀಡುವಂತೆ ಸಿ.ಟಿ.ರವಿ ಪ್ರಾರ್ಥನೆ.ಅಯೋಧ್ಯೆಯಲ್ಲಿ ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ರು. ಬಿಜೆಪಿ ಹಲವು ವರ್ಷಗಳ ಕಾಲ ಹೋರಾಡಿದ್ದವು. ಈಗ ಮತ್ತೆ ರಾಮ ಮಂದಿರ ನಿರ್ಮಾಣವಾಗುತ್ತದೆ. ಹಲವು ವರ್ಷಗಳ ಬಳಿಕ ರಾಮನಿಗೆ ನ್ಯಾಯ ಸಿಕ್ಕಿದೆ ಎಂದು ರವಿ ಹೇಳಿದ್ದಾರೆ.
ಅಲ್ಲದೇ, ರಾಮನಿಗೆ ನ್ಯಾಯ ಸಿಕ್ಕಿದೆ, ರಾಮನ ಬಂಟ ಹನುಮನಿಗೂ ನ್ಯಾಯ ಸಿಗಬೇಕು. ರಾಮನ ಬಂಟ ಹನುಮಂತ. 1795ರಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ರು. ಆಂಜನೇಯಸ್ವಾಮಿ ಮೂರ್ತಿಯನ್ನು ಕಾವೇರಿಗೆ ಎಸೆದ್ರು. ಈಗ ಹನುಮನಿಗೆ ನ್ಯಾಯ ಕೊಡಿಸಬೇಕಿದೆ. ಕಾಂಗ್ರೆಸ್‌ನಿಂದ ಹನುಮಂತನಿಗೆ ನ್ಯಾಯ ಕೊಡಸಲು. ಹನುಮಂತನಿಗೆ ನ್ಯಾಯಕೊಡಿಸಬೇಕು ಎಂದ್ರೆ ಬಿಜೆಪಿ ಬರಬೇಕು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಬಂದ್ರೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣವಾಗುತ್ತದೆ. ಜನರು ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದಗೆ ಮತ ಹಾಕಿ ಗೆಲ್ಲಿಸಿ. ಆಗ ಹನುಮನಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಅವರಿಗೆ ಹನುಮನಿಗೆ ನ್ಯಾಯ ಕೊಡಿಸುತ್ತೀರಾ ಎಂದ್ರೆ ಅವರು ಓಡಿ ಹೋಗ್ತಾರೆ. ಈ ಚುನಾವಣೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಗೌರವ ಉಳಿಸುವ ಚುನಾವಣೆ. ಈ ನಾಡನ್ನು ಕಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಟಿಪ್ಪು ಈ ನಾಡನ್ನು ಒಡೆಯುವ ಕೆಲಸ ಮಾಡಿದ್ದಾನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಟಿಪ್ಪುವಿನ ಜಪ ಮಾಡ್ತಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಟ್ಟು ಬಿಜೆಪಿಗೆ ಮತ ನೀಡಿ ಎಂದು ಸಿ.ಟಿ.ರವಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆ: ಕೆ.ಅಣ್ಣಾಮಲೈ
ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್..
ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..