ನವದೆಹಲಿ: ಬಾಲಾಕೋಟ್ ನಲ್ಲಿ ಉಗ್ರರ ಮೇಲೆ ಅಟ್ಯಾಕ್ ಮಾಡಿ ಹುತಾತ್ಮ ಸಿಆರ್ ಪಿಎಫ್ ಯೋಧರ ಆತ್ಮಕ್ಕೆ ಪ್ರಧಾನಿ ಮೋದಿ ಶಾಂತಿ ದೊರಕಿಸಿದ್ದು ಇತಿಹಾಸದ ಪುಟಗಳಲ್ಲಿ ಬರೆಯಲಾಗಿದೆ. ಸಿಆರ್ ಪಿಎಫ್ ಮೇಲೆ ದಾಳಿ ನಡೆಸಿದ್ದ ಉಗ್ರರನ್ನು ನುಗ್ಗಿ ನುಗ್ಗಿ ಮಟ್ಟಹಾಕುತ್ತೇವೆ ಅಂತ ಹೇಳಿದಂತೆಯೇ ನರೇಂದ್ರ ಮೋದಿ ಮಾಡಿ ತೋರಿಸಿದ್ದರು. ಆದ್ರೆ ಮೋದಿ ಮಾಡಿದ್ದ ಈ ಅಚಲ ನಿರ್ಧಾರವೇ ಅವರಿಗೆ ಶ್ರೀ ರಕ್ಷೆಯಾಗಿದೆ.ಬಾಲಾಕೋಟ್ ನ ಉಗ್ರರ ತರಬೇತಿ ಕೇಂದ್ರದ ಮೇಲೆ ದಾಳಿಗೆ ಮೋದಿ ಮಾಡಿದ್ದ ಪ್ಲ್ಯಾನ್ ಮತ್ತೆ ಅವರನ್ನು ಪ್ರಧಾನಿಯಾಗುವಂತೆ ಮಾಡಿದೆ. ಈ ವಿಚಾರವನ್ನು ಐಎಎನ್ ಎಸ್ ಮತ್ತು ಸಿ-ವೋಟರ್ ಸಮೀಕ್ಷೆಗಳು ಬಹಿರಂಗಪಡಿಸಿವೆ.
ಮೇ 31ರ ಅಂತ್ಯಕ್ಕೆ ಮೋದಿ ಆಡಳಿತಕ್ಕೆ ಶೇಕಡಾ 48.87ರಷ್ಟು ಜನ ತುಂಬಾ ತೃಪ್ತಿವ್ಯಕ್ತಪಡಿಸಿದ್ರೆ, ಶೇಕಡಾ 25.74ರಷ್ಟು ಮಂದಿ ಸಮಾಧಾನ ಹಾಗೂ ಕೇವಲ 15.39ರಷ್ಟು ಜನ ಮಾತ್ರ ಮೋದಿ ಆಡಳಿತ ಬೇಸರತಂದಿದ್ದು, ಸಮರ್ಪಕವಾಗಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲಾಸೋರ್ ಮೇಲೆ ಉಗ್ರರ ಮೇಲೆ ಏರ್ ಸ್ಟ್ರೈಕ್ ಆದ ಮೇಲೊಂತೂ ಮೋದಿ ಸರ್ಕಾರದ ಮೇಲಿನ ಮೆಚ್ಚುಗೆ ಅಭಿಮಾನದ ಪ್ರಮಾಣವೂ ಏರಿಕೆಯಾಗಿದೆ ಅಂತ ಸಮೀಕ್ಷೆಗಳು ತಿಳಿಸಿವೆ. ಇದರಿಂದಲೇ ಬಿಜೆಪಿ 2014ರಲ್ಲಿ ಪಡೆದಿದ್ದಕ್ಕಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯೋದಕ್ಕೆ ನೆರವಾಗಿದೆ ಅನ್ನೋ ಅಂಶವನ್ನು ಸಮೀಕ್ಷೆಗಳು ಬಹಿರಂಗಪಡಿಸಿವೆ.
ಇದು ಅಮಿತ್ ಶಾ ಹೈಟೆಕ್ ಪ್ಲಾನ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ