ಬೆಂಗಳೂರು: ಪ್ರತಿ ತಿಂಗಳ 4ನೇ ಶನಿವಾರವನ್ನು ಸರ್ಕಾರಿ ರಜೆ ಅಂತ ಘೋಷಿಸೋದಕ್ಕೆ ಸಚಿವ ಸಂಪುಟ ಉಪ ಸಮಿತಿಯು ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನೇತೃತ್ವದ ಸಚಿವ ಸಂಪುಟ ಸಮಿತಿ ಶಿಫಾರಸು ಮಾಡಿದ್ದು, ಸರ್ಕಾರಿ ನೌಕರರ ಕೆಲಸದ ದಿನಗಳು ಮತ್ತು ರಜಾ ದಿನಗಳನ್ನ ಪರಿಷ್ಕರಿಸುವಂತೆ 6ನೇ ವೇತನ ಆಯೋಗ ಮಾಡಿದ್ದ ಶಿಫಾರಸಿನ ಹಿನ್ನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಆಯೋಗವು ಸರ್ಕಾರಿ ನೌಕರರಿಗೆ ಪ್ರತ ತಿಂಗಳ 2ನೇ ಶನಿವಾರವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಮತ್ತೊಂದು ಶನಿವಾರವನ್ನ ಸಾರ್ವತ್ರಿಕ ರಜೆ ಅಂತ ಘೋಷಿಸೋಕೆ ಸಾಧ್ಯವಿದೆ ಅಂತ ಪ್ರಸ್ತಾಪಿಸಿತ್ತು.
2ನೇ ಶನಿವಾರವಲ್ಲದೆ ಬ್ಯಾಂಕ್ ಗಳಿಗೆ 4ನೇ ಶನಿವಾರವೂ ರಜೆ ಇರುತ್ತದೆ. ಹೀಗಾಗಿ 4ನೇ ಶನಿವಾರವನ್ನು ರಜೆ ದಿನ ಅಂತ ಘೋಷಿಸಿದ್ರೆ ಸರ್ಕಾರಿ ನೌಕರರಿಗೆ ತಿಂಗಳಲ್ಲಿ 2 ವಾರಾಂತ್ಯಗಳು ದೊರೆಯಲಿದ್ದು ತಮ್ಮ ಖಾಸಗಿ ಕರ್ತವ್ಯಗಳನ್ನು ನಿರ್ವಹಿಸಲು ಅನುಕೂಲವಾಗುತ್ತೆ. ಇದರಿಂದ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವ ಸಾಧ್ಯತೆ ಇದೆ ಅಂತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಾವೇರಿ ಕಾಪಾಡೋಕೆ ಯಾರೂ ಇಲ್ವಾ…?ತಪ್ಪದೇ ಈ ವಿಡಿಯೋ ನೋಡಿ