ಕರ್ನಾಟಕದ ರಿಯಲ್ ಸಿಂಗಂ ಖಡಕ್ ಪೊಲೀಸ್ ಅಧಿಕಾರಿ ರಾಜೀನಾಮೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣವಂತೆ. ಈ ರೀತಿಯ ಸುದ್ದಿ ಈಗ ಕೇಳಿ ಬರ್ತಿದೆ.
ಐಪಿಎಸ್ ಅಧಿಕಾರಿ ಅಣ್ಣಾಮಲೈ ವಯಕ್ತಿ ಕಾರಣ ನೀಡಿ ಪೊಲೀಸ್ ಕೆಲಸಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಣ್ಣಾಮಲೈ ಪೊಲೀಸ್ ಇಲಾಖೆಯಲ್ಲಿ ತಮ್ಮ ದಕ್ಷತೆಯಿಂದಾಗಿಯೇ ಕಡಿಮೆ ಸೇವಾವಧಿಯಲ್ಲೇ ಕೋಟ್ಯಂತರ ಕನ್ನಡಿಗರ ಮನಗೆದ್ದಿದ್ದಾರೆ.
ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ಬೆಂಗಳೂರು ದಕ್ಷಿಣದ ಡಿಸಿಪಿ ಹುದ್ದೆಗೆ ರಾಜೀನಾಮೆ ನೀಡಿ ಪೊಲೀಸ್ ಇಲಾಖೆಯನ್ನೇ ದಂಗು ಬಡಿಸಿದ್ದಾರೆ.
ಇನ್ನು ಅಣ್ಣಾಮಲೈ ಮುಂದೇನು ಅನ್ನೋದನ್ನ ನೋಡೋದಾದ್ರೆ ಅವರು ರಾಜಕೀಯಕ್ಕೆ ಇಳಿಯೋದು ಪಕ್ಕಾ ಆಗಿದೆ. ಮೊದಮೊದಲು ಡಿಎಂಕೆ ಸೇರ್ತಾರೆ ಅನ್ನೋ ಮಾತು ಕೇಳಿ ಬರ್ತಿತ್ತು.. ಆದ್ರೀಗ ಅಣ್ಣಾಮಲೈ ನಿರ್ಧಾರದ ಹಿಂದೆ ನರೇಂದ್ರ ಮೋಡಿ, ಅಮಿತ್ ಶಾ ಇರೋದು ಸ್ಪಷ್ಟವಾಗ್ತಿದೆ. ಇಡೀ ದೇಶದಲ್ಲಿ ಮೋದಿ ಅಲೆ ಬೀಸಿದ್ರು ತಮಿಳುನಾಡಿನಲ್ಲಿ ಮಾತ್ರ ಬಿಜೆಪಿ ನೆಲೆಯೂರಲು ಸಾಧ್ಯವಾಗ್ತಿಲ್ಲ. ಹೀಗಾಗಿ 2021ರ ತಮಿಳುನಾಡು ವಿಧಾನಸಭೆ ಚುನಾವಣೆಯನ್ನ ದೃಷ್ಠಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ತೀವ್ರಗೊಳಿಸಲು ಮೋದಿ, ಅಮಿತ್ ಶಾ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಮೋದಿ ತಂತ್ರಗಾರಿಕೆಯ ಮೊದಲ ಭಾಗವೇ ಅಣ್ಣಾಮಲೈ ರಾಜೀನಾಮೆ ಅಂತ ಹೇಳಲಾಗ್ತಿದೆ.
ಹೌದು, ತಮಿಳುನಾಡು ಬಿಜೆಪಿ ಸಾರಥ್ಯವನ್ನ ಅಣ್ಣಾಮಲೈ ವಹಿಸಿಕೊಳ್ಳಲಿದ್ದು 2021ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜುಗೊಳಿಸೋ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ. ಜಯಲಲಿತಾ ಇಲ್ಲದೆ ಎಐಎಡಿಎಂಕೆ ಪಕ್ಷ ನೆಲಕಚ್ಚುತ್ತಿದೆ. ಇನ್ನು ಸ್ಟಾಲಿನ್ ಕೂಡ ಕರುಣಾನಿಧಿ ಮಟ್ಟಿಗೆ ಪ್ರಭಾವಿಯಾಗಿ ಉಳಿದಿಲ್ಲ. ರಜನಿಕಾಂತ್ ಮೋದಿಯನ್ನ ಬೆಂಬಲಿಸುತ್ತಿದ್ದರೂ ಅವ್ರು ಬಿಜೆಪಿ ಸೇರೋದು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ತಮಿಳು ಅಸ್ಮಿತೆಯೇ ಮುಖ್ಯ ಹಿಂದಿ ಭಾಷಿಕರನ್ನ ತಮಿಳರು ನಾಯಕರನ್ನಾಗಿ ಒಪ್ಪಿಕೊಳ್ಳೋ ಮಾತೇ ಇಲ್ಲ. ಹೀಗಾಗಿ ಸಂಘಟನಾ ಕೌಶಲ್ಯ ಇರೋ ಅಣ್ಣಾಮಲೈ ಬಳಸಿಕೊಂಡು ಬಿಜೆಪಿ ಸಂಘಟನೆ ಮಾಡಲು ಮೋದಿ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.
ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಕೂಡ ಅಣ್ಣಾಮಲೈ ಮನವೊಲಿಸಿ ರಾಜಕಾರಣಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗ್ತಿದೆ.. ಬಂಡೆ ಮೇಲೆ ಭತ್ತ ಬೆಳೆಬಹುದು, ಆದರೆ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ನೆಲೆಯೂರೋದು ಕಷ್ಟ. ಈ ಪರಿಸ್ಥಿತಿಯಲ್ಲಿ ಅಣ್ಣಾಮಲೈ ಬಿಜೆಪಿ ಸೇರೋ ನಿರ್ಧಾರ ಸರಿಯೇ ಅನ್ನೋ ಪ್ರಶ್ನೆ ಉದ್ಭವವಾಗಿದೆ.
ಕೆಲಸದ ಕಡೇ ದಿನ ಅಣ್ಣಾಮಲೈ ಪ್ರಯಾಣ ಹೇಗಿತ್ತು ಗೊತ್ತಾ…?ಈ ವಿಡಿಯೋ ತಪ್ಪದೇ ನೋಡಿ