film story
ಪ್ರತಿಯೊಂದರ ವಸ್ತುಗಳ ಬೆಲೆ ಏರಿಕೆಯಾಗಿರುವ ಬೆನ್ನಲ್ಲೆ ಮನರಂಜನೆ ವಾಹಿನಿಗಳಾದ ಸೋನಿ ಪಿಕ್ಚರ್ , ಜಿ ಸಿನಿಮಾ ಸೇರಿ ಇನ್ನು ಹಲವು ವಾಹಿನಿಗಳು ತೆರಿಗೆ ಏರಿಕೆ ಯಾಗಿರುವ ಕಾರಣ ವಾಹಿನಿಗಳು ಸಹ ತಮ್ಮ ಹಕ್ಕಿನ ಬೆಲೆಯನ್ನು ಏರಿಕೆ ಮಾಡಿವೆ. ಆದರೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಕೇಬಲ್ ಟಿವಿ ಆಪರೇಟರ್ ಗಳು ವಾಹಿನಿಗಳಿಗೆ ಹಕ್ಕನ್ನು ಪಡೆದುಕೊಳ್ಳಲು ಹೆಚ್ಚಿನ ಬೆಲೆ ನೀಡಲು ಒಪ್ಪುತ್ತಿಲ್ಲ ಅದಕ್ಕಾಗಿ ಈಗಾಗಲೆ ಕೆಬಲ್ ಚಾನೆಲ್ಗಳಲ್ಲಿ ಮನರಂಜನೆ ವಾಹಿನಿಗಳು ಈಗಾಗಲೆ ಸೇವೆಯನ್ನು ನಿಲ್ಲಿಸಿವೆ.
ಹೊಸ ದರ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ಕೇಬಲ್ ಟಿವಿಗಳಲ್ಲಿ ಝೀ ಎಂಟರ್ಟೈನ್ಮೆಂಟ್, ಸ್ಟಾರ್ ಮತ್ತು ಸೋನಿ ಪಿಕ್ಚರ್ಸ್ ಮೊದಲಾದ ವಾಹಿನಿಗಳ ಪ್ರಸಾರ ನಿಲ್ಲಿಸಲಾಗಿದೆ. ಒಂದು ಅಂದಾಜು ಪ್ರಕಾರ 4.5 ಕೋಟಿಗೂ ಹೆಚ್ಚು ಕೇಬಲ್ ಟಿವಿ ಗ್ರಾಹಕರಿಗೆ ಈ ಹಲವು ವಾಹಿನಿಗಳು ಲಭ್ಯ ಇರುವುದಿಲ್ಲ. ಇದು ಟಿವಿ ಬ್ರಾಡ್ಕ್ಯಾಸ್ಟರ್ ಮತ್ತು ಕೇಬಲ್ ಆಪರೇಟರುಗಳ ನಡುವಿನ ಭಿನ್ನಾಭಿಪ್ರಾಯದ ಫಲಶ್ರುತಿ. . ಇದರಿಂದ ಟಿವಿ ಚಾನಲ್ ಸಬ್ಸ್ಕ್ರಿಪ್ಶನ್ ದರ ಶೇ. 10-15ರಷ್ಟು ಹೆಚ್ಚಳ ಕಂಡಿವೆ. ಬೊಕೆ ಗ್ರೂಪ್ನಲ್ಲಿ ಇಲ್ಲದ ಕೆಲ ವೈಯಕ್ತಿಕ ಚಾನಲ್ಗಳ ದರ ಇನ್ನೂ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕೇಬಲ ಟಿವಿ ಗ್ರಾಹಕರು ಬೆಲೆ ಏರಿಕೆಯ ಹೊರೆ ಹೊರುವಂತಾಗಿದ್ದು, ಪರಿಣಾಮವಾಗಿ ಗ್ರಾಹಕರು ತಮಗೆ ಕೈತಪ್ಪಿ ಹೋಗುತ್ತಿದ್ದಾರೆ ಎಂಬುದು ಕೇಬಲ್ ಟಿವಿ ಉದ್ಯಮಿಗಳ ಅಳಲಾಗಿದೆ.
ಬಸ್ ನಲ್ಲಿ ಪ್ರಯಾಣಿಸುತಿದ್ದ ಮದ್ಯವ್ಯಸನಿ, ಸೀಟಿನ ಮೇಲೆ ಮೂತ್ರ ವಿಸರ್ಜನೆ