national story
ನಾವು ಯಾವುದೇ ಅಂಗಡಿ ಮತ್ತು ದೇವಸ್ಥಾನಗಳಿಗೆ ಹೋದರೆ ಅಲ್ಲಿಕಳ್ಳರ ಕಾಟ ಜಾಸ್ತಿ ಇರುವ ಕಾರಣ ಸಿಸಿಟಿವಿ ಕ್ಯಾಮರಾ ಗಳು ಇರುವುದನ್ನು ನೋಡಿರುತ್ತೇವೆ ಮತ್ತು ಜನ ಜಾಸ್ತಿ ಇರುವ ಸ್ಥಲಗಳಲ್ಲಿ ಪೋಲಿಸ್ ಬಂದೋಬಸ್ತ ಇಉವುದನ್ನು ನೋಡಿರುತ್ತೇವೆ ಆದರೆ ಬಾರತದ ಈ ಪ್ರದೇಶದಲ್ಲಿರುವ ಈ ದಿನಸಿ ಅಂಗಡಿಯಲ್ಲಿ ಯಾವುದೇ ರೀತಿಯ ಅಂಗಡಿಗೆ ಸಂಬಂದೆ ಪಟ್ಟ ಜನ ಇರುವುದೇ ಇಲ್ಲ
ನಮ್ಮ ಭಾರತದ ಪರ್ವತ ರಾಜ್ಯ ಎಂದೇ ಪ್ರಸಿದ್ದವಾಗಿರುವ ನಾಗಾಲ್ಯಾಂಡ್ನ ಜುಲೇಕೆಯಲ್ಲಿ ಕಾಣಸಿಗುತ್ತದೆ. ಖೊನೊಮಾದಿಂದ ಭಾರತದ ಮೊದಲ ‘ಹಸಿರು ಗ್ರಾಮ ಕೇವಲ 10 ಕಿ.ಮೀ ಮತ್ತು ಕೊಹಿಮಾದಿಂದ ನಾಗಲ್ಯಾಂಡ್ನ ರಾಜಧಾನಿ ಸುಮಾರು 40 ಕಿ.ಮೀ ದೂರದಲ್ಲಿರುವ ಜುಲೇಕೆಯು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.
. ನೋಡಲು ಒಂದು ತರಕಾರಿ ಅಂಗಡಿಯಂತೆ ಕಂಡರೂ, ಇದು ಸಾಮಾನ್ಯ ಅಂಗಡಿಯಲ್ಲ. ಏಕೆಂದರೆ ಸಾಮಾನ್ಯವಾಗಿ ಅಂಗಡಿ ಎಂದರೆ ಅಲ್ಲಿ ಮಾಲೀಕರು ಅಥವಾ ವ್ಯಾಪಾರಿಗಳು ಇರುತ್ತಾರೆ. ಜನರು ಬೇಕಾದ ದಿನಸಿ, ಸಾಮಾನುಗಳನ್ನು ತೆಗೆದುಕೊಂಡು ವ್ಯಾಪಾರಿಗಳಿಗೆ ಹಣವನ್ನು ನೀಡುತ್ತಾರೆ. ಆದರೆ ಈ ಪುಟ್ಟ ಸಾವಯವ ಕಿರಾಣಿ ಅಂಗಡಿಯಲ್ಲಿ ಯಾವುದೇ ವ್ಯಾಪಾರಿಗಳಿಲ್ಲದೆ ಜನನಿಬಿದ ಪ್ರದೇಶದಲ್ಲಿರುವ ಈ ಅಂಗಡಿಯು ಹಣ್ಣುಗಳು ಮತ್ತು ತರಕಾರಿಗಳನ್ನು ಮಾರುತ್ತದೆ. ಇಲ್ಲಿ ಯಾವುದಕ್ಕೆ ಎಷ್ಟು ರೂಪಾಯಿ ಎಂಬ ಬೋರ್ಡ್ ಕೂಡ ಇದೆ, ಆದರೆ ಮಾಲೀಕರು ಮಾತ್ರ ಇಲ್ಲ. ಇಲ್ಲಿಗೆ ಬಂದ ಜನ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಬೋರ್ಡ್ನಲ್ಲಿ ಬರೆದಷ್ಟು ಹಣವನ್ನು ಅಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕಿ ಹೋಗುತ್ತಾರೆ.
ಜುಲೇಕೆ ನಾಗಾಲ್ಯಾಂಡ್ನ ಜನಪ್ರಿಯ ಪ್ರವಾಸಿ ತಾಣವಲ್ಲದಿದ್ದರು ಇಲ್ಲಿನ ಪ್ರಕೃತಿ ಹಸಿರು ಜುಲೆಕೆಯನ್ನು ಅತಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದೆ. ಈ ಪ್ರದೇಶವು ಸುಮಾರು 200 ಮನೆಗಳಿದ್ದು ಜನರು ತುಂಬಾ ವಿರಳ ಜನಸಂಖ್ಯೆಯನ್ನು ಹೊಂದಿದೆ, ಹೆಚ್ಚಾಗಿ ಅಂಗಮಿಗಳು ಇಲ್ಲಿ ವಾಸಿಸುತ್ತಾರೆ. ಇದು ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶದಲ್ಲಿ ಒಂದಾಗಿದೆ