Web Story: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಅಲ್ಲದೇ ಅಘೋರಿಗಳು ಶವಗಳನ್ನು ತಿನ್ನುತ್ತಾರೆ ಅಂತಾ ಹೇಳುತ್ತಾರೆ. ಹಾಗಾದ್ರೆ ಇದು ಸತ್ಯಾನಾ..? ಈ ಬಗ್ಗೆ ಡಾ.ಅಗರಭನತ್ ಅಘೋರ ಅವರೇ ಮಾತನಾಡಿದ್ದಾರೆ ನೋಡಿ.
ಬಾಂಧವ್ಯದಿಂದ ಬೇರ್ಪಡುವುದೇ ಶವ ಸಾಧನೆ ಅಂತಾರೆ ಡಾ.ಅಗರ್ಬನತ ಅಘೋರ ಅವರು. ಸಾಮಾನ್ಯ ಮನುಷ್ಯನಿಗೆ ಕೋಪ ಬರುತ್ತದೆ. ಆಸೆಯಾಗುತ್ತದೆ. ಮೋಹವಿರುತ್ತದೆ. ಕಾಮ, ಲೋಭ, ಮದ, ಮಾತ್ಸರ್ಯ ಎಲ್ಲವೂ ಇರುತ್ತದೆ. ಆದರೆ ಅಘೋರರಾಗಬೇಕು ಅಂದ್ರೆ, ಅವರು ಮಾಡುವ ಪ್ರಥಮ ಕೆಲಸವೇ, ಇವುಗಳ ಮೇಲೆ ಹಿಡಿತ ಸಾಧಿಸುವುದು. ಹೀಗೆ ಹಿಡಿತ ಸಾಧಿಸಿದ ಸಾಧನೆ ಸಂಪೂರ್ಣವಾದಾಗಲೇ ನಾಗಾಸಾಧು ಅಘೋರಿಯಾಗಲು ಮತ್ತು ಅಘೋರಿ ಅಘೋರರಾಗಲು ಸಾಧ್ಯ ಅಂತಾರೆ ಅಗರ್ಬನತ.
ಇನ್ನು ಅಘೋರಿಗಳು ಶವ ತಿನ್ನುತ್ತಾರೆ ಎಂಬ ಭಯವಿದೆ. ಆ ಬಗ್ಗೆ ಮಾತನಾಡಿದ ಇವರು, ಸ್ಮಶಾನದಲ್ಲಿ ಸಾಧನೆಗೆ ಕುಳಿತಾಗ ಶವ ಸೇವನೆ ಮಾಡಿದರೆ, ಇಂತಿಷ್ಟು ದಿನ ಹಸಿವಾಗುವುದಿಲ್ಲ ಅನ್ನೋ ನಿಯಮವಿದೆ. ಹಾಗಾಗಿ ನಾವು ಶವದ ಕೆಲ ಭಾಗವನ್ನು ಮಾತ್ರ ತಿನ್ನುತ್ತೇವೆ. ಪೂರ್ತಿ ಹೆಣದ ಸೇವನೆ ಮಾಡುವುದಿಲ್ಲ. ಅಲ್ಲದೇ ಶವ ಸಾಧನೆ ಮಾಡುವವರು ಗುರುಮುಖೇಣವೇ ಮಾಡಬೇಕು.
ಕೆಲವರು ಶವ ಸಾಧನೆ ಮಾಡುತ್ತೇನೆಂದು ಬರುತ್ತಾರೆ. ಶವವನ್ನು ತಿಳಿಯದೇ, ನಿಯಮ ಪಾಲಿಸದೇ ತಿಂದು ಬಿಡುತ್ತಾರೆ. ದೇಹದಲ್ಲಿ ಇಲ್ಲದ ಸಮಸ್ಯೆ ತಂದುಕ“ಳ್ಳುತ್ತಾರೆ. ಹಾಗಾಗಿ ಗುರುಮುಖೇನ ಶವ ಸಾಧನೆ ಮಾಡಬೇಕು.
ಶವವನ್ನು ಆಯ್ಕೆ ಮಾಡುವ ನಿಯಮವೂ ಇದೆ. ಆ ಶವದ ಆತ್ಮಕ್ಕೆ ಮೋಕ್ಷ ಸಿಕ್ಕಿದೆಯೋ ಇಲ್ಲವೋ ಅಂತಲೂ ನೋಡಬೇಕು. ಅಂಥವರಿಗೆ ಅಘೋರಿಗಳು ಮೋಕ್ಷವನ್ನೂ ನೀಡುತ್ತಾರೆ ಎಂದು ಅಗರ್ಬನತ್ ಅವರು ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.