Mandya: ಮಂಡ್ಯ: ಜನರು ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಅದೇ ರೀತಿ 30 ವರ್ಷ ದಾಟಿದ್ದರು ಮದುವೆಯಾಗದ ಅವಿವಾಹಿತರು ವಧು ಸಿಗುವಂತೆ ಮಾದಪ್ಪನ ಮೊರೆ ಹೋಗಿದ್ದಾರೆ. ಹೌದು ಅನ್ನದಾತರ ಮಕ್ಕಳಿಗೆ ಹೆಣ್ಣು ಕೊಡಿ ಅಂತ ಯುವಕರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ.
ಇನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ ವೇಳೆ ಮಂಡ್ಯದಿಂದ ನೂರಾರು ಯುವಕರಿಂದ ಪಾದಯಾತ್ರೆ ನಡೆಸಿದ್ದಾರೆ. ಊರಿಗೆ ಊರೇ ಮದಹೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮೈಸೂರಿನ ದೊಡ್ಡಮುಲಗೂಡು ಗ್ರಾಮದ ಯುವಕರು ತಂದೆ, ತಾಯಿಯ ಜೊತೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸಿದ್ದಾರೆ. ಮದುವೆ ವಯಸ್ಸಿಗೆ ಬಂದಿರುವ ಯುವ ರೈತರಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಅನ್ನದಾತರ ಮಕ್ಕಳಿಗೂ ಹೆಣ್ಣು ಕೊಡಿ ಅಂತಾ 130 ಕಿ.ಮೀ. ದೂರದವರೆಗೆ ಮಾದಪನ್ನ ಸನ್ನಿಧಿಗೆ ಹೋಗಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯಲ್ಲಿ ಅವಿವಾಹಿತರು ಪಾದಯಾತ್ರೆ ನಡೆಸಿದ್ದರು. ಚಾಮರಾಜನಗರದ ಮಾದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಪಾದಯಾತ್ರೆ ನಡೆಸಿದ ಹಲವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಸಾಕಷ್ಟು ಅವಿವಾಹಿತರು ಪಾದಯಾತ್ರೆ ಮಾಡಿದ್ದಾರೆ.
ಹಾಸನಾಂಬೆ ದರ್ಶನದ ವೇಳೆ ಅವಘಡ: ಆಸ್ಪತ್ರೆಗೆ ಬಂದು, ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಗುಂಡೂರಾವ್..
ಹಾಸನಾಂಬೆಯ ದರ್ಶನದ ವೇಳೆ ಶಾಕ್ ಹೊಡೆದು ಯುವತಿಯ ಸ್ಥಿತಿ ಗಂಭೀರ: ಹಲವರು ಆಸ್ಪತ್ರೆಗೆ ದಾಖಲು