National Political News: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರು ಅಪಘಾತನಾಗಿದ್ದು, ಸಣ್ಣಪುಟ್ಟ ಗಾಯವಾಗಿದೆ. ಬರ್ದ್‌ಮಾನ್‌ನಿಂದ ಕೊಲ್ಕತ್ತಾಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಸ್ಥಳದಲ್ಲಿ ಮಳೆ ಇದ್ದ ಕಾರಣ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ಬದಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಡ್ರೈವರ್ ಬ್ರೇಕ್ ಹಾಕಿದಾಗ, ಮಮತಾ ಬ್ಯಾನರ್ಜಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೋಲ್ಕತ್ತಾ ಆಸ್ಪತ್ರೆಯಲ್ಲಿ ಮಮತಾ ಬ್ಯಾನರ್ಜಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಷ್ಟೇ ಮಮತಾ ಬ್ಯಾನರ್ಜಿ ತಾವು ಇಂಡಿಯಾ ಒಕ್ಕೂಟದಿಂದ ಹೊರಬಂದು, ಏಕಾಂಗಿಯಾಗಿ ಈ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲ ಹಿಂಪಡೆದ ತೃಣಮೂಲ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲಲಿದೆ.
ಮೆಕ್ಸಿಕೋದಲ್ಲಿ ಮೊದಲ ರಾಮಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆ