Thursday, May 16, 2024

Latest Posts

ಮೆಕ್ಸಿಕೋದಲ್ಲಿ ಮೊದಲ ರಾಮಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆ

- Advertisement -

International News: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.  ಇನ್ನು ಕೆಲವೇ ಕ್ಷಣಗಳಲ್ಲಿ ರಾಾಮಮಂದಿರ ಉದ್ಘಾಟನೆಯಾಗಲಿದೆ. ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಆದರೆ ಇದ್ಕಕೂ ಮುನ್ನ ಮೆಕ್ಸಿಕೋ ದೇಶದಲ್ಲಿ ಮೊದಲ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಿದೆ.

ಮೆಕ್ಸಿಕೋದ ರಾಮಮಂದಿರದಲ್ಲಿ ಭಾರತದಿಂದ ಕೊಂಡೊಯ್ದ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ಅಲ್ಲಿರುವ ಭಾರತೀಯರು ರಾಮನ ಪೂಜೆ, ಭಜನೆ ಮಾಡಿ, ತಮ್ಮ ಭಕ್ತಿಯನ್ನು ತೋರಿದ್ದಾರೆ. ಅಮೆರಿಕಾ, ಮೆಕ್ಸಿಕೋ ಸೇರಿ ವಿದೇಶದಲ್ಲಿ ಹಲವೆಡೆ ಹಿಂದೂಗಳು, ಭಾರತೀಯರು, ರಾಮಭಕ್ತರು ಕೇಸರಿ ಧ್ವಜ ಹಿಡಿದು, ರಾಮನಾಮ ಜಪ ಮಾಡುತ್ತಿದ್ದಾರೆ.

ಇತ್ತ ಅಯೋಧ್ಯಾ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಆಹ್ವಾನ ಸ್ವೀಕರಿಸಿದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಯೋಧ್ಯೆಗೆ ಹೋಗಲಾಾಗದೇ ಇರುವ ರಾಮಭಕ್ತರು ತಮ್ಮ ಊರಿನಲ್ಲಿ, ತಮ್ಮ ಮನೆಗಳಲ್ಲಿ ರಾಮನ ಪೂಜೆ, ಭಜನೆ, ಜಪ ಮಾಡಿ, ಭಕ್ತಿ ತೋರಿದ್ದಾರೆ.

ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಭಾರತೀಯರಿಗೆ ರಾಮಮಂದಿರದ ಶುಭಾಶಯ ತಿಳಿಸಿದ ದಕ್ಷಿಣ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

- Advertisement -

Latest Posts

Don't Miss